Uncategorized

ನಕಲು ಮಾಡಿದ ವಿದ್ಯಾರ್ಥಿಯ ಕೈಗೆ ಕಚ್ಚಿದ ಉಪನ್ಯಾಸಕ

ಹೊಸನಗರ: ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದ ವಿದ್ಯಾರ್ಥಿಯ ಕೈಗೆ ಕೋಪದ ಭರದಲ್ಲಿ ಉಪನ್ಯಾಸಕ ಕಚ್ಚಿದ್ದರಿಂದ ವಿದ್ಯಾರ್ಥಿ ಆಸ್ಪತ್ರೆ ಸೇರಿದ ಘಟನೆ ಹೊಸನಗರದ ಕೊಡಚಾದ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.

ಅಂತಿಮ ಬಿಎ ಓದುತ್ತಿದ್ದ ವಿದ್ಯಾರ್ಥಿ ಪರೀಕ್ಷೆಯಲ್ಲಿ ಬರೆಯಲು ಬಂದಿದ್ದಾನೆ. ಈ ವೇಳೆ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿ ನಕಲು ಮಾಡುತ್ತಿದ್ದ ಎನ್ನಲಾಗಿದೆ. ತಕ್ಷಣ ಕೋಪಗೊಂಡ ಉಪನ್ಯಾಸಕ ಪ್ರಶ್ನಿಸಿದ್ದಾರೆ. ಇಬ್ಬರ ನಡುವೆ ವಾಗ್ವಾದ ನಡೆದಿದೆ. ಪಿತ್ತನೆತ್ತಿಗೇರಿಸಿಕೊಂಡ ಉಪನ್ಯಾಸಕ ಅಂಜನ್ ಕುಮಾರ್‌ ವಿದ್ಯಾರ್ಥಿ ಕೈಗೆ ಕಚ್ಚಿದ್ದಾರೆ ಎನ್ನಲಾಗಿದೆ. ಸದ್ಯ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ತಿಳಿದು ಬಂದಿದೆ.

Related posts

ಮುಖ್ಯಮಂತ್ರಿ ಎದುರೇ ವೇದಿಕೆಯಲ್ಲಿ ಅಶ್ವಥ್ ನಾರಾಯಣ, ಡಿ.ಕೆ.ಸುರೇಶ್ ಜಟಾಪಟಿ

ಎನ್ ಸಿಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರಕಾರ 

ಅಧಿಕಾರಕ್ಕೆ ಬಂದರೆ ಪ್ರತಿಮನೆಗೂ 200 ಯೂನಿಟ್ ಉಚಿತ ವಿದ್ಯುತ್: ಡಿಕೆಶಿ ಘೋಷಣೆ