ಬೆಂಗಳೂರುರಾಜ್ಯ

ಮತ್ತೆ ಬಿಗ್‌ ಬಾಸ್‌ಗೆ ಎಂಟ್ರಿ ಕೊಡಲಿದ್ದಾರೆ ಲಾಯರ್‌ ಜಗದೀಶ್‌..?, ಕಾರ್ಯಕ್ರಮದಲ್ಲಿ ದಿನಕ್ಕೊಂಡು ಟ್ವಿಸ್ಟ್‌

162

ನ್ಯೂಸ್‌ ನಾಟೌಟ್‌: ಹಲವಾರು ವಿವಾದಗಳೊಂದಿಗೆ ಬಿಗ್‌ ಬಾಸ್‌ ಕನ್ನಡ-11 (Bigg Boss Kannada-11) ಪ್ರವೇಶಿಸಿದ ಲಾಯರ್‌ ಜಗದೀಶ್‌ ನಾಮಿನೇಟ್‌ ಆಗಿ ಹೊರಬಂದಿದ್ದಾರೆ. ಇದೀಗ ಮತ್ತೆ ಬಿಗ್‌ ಬಾಸ್‌ ಮನೆ ಪ್ರವೇಶಿಸುತ್ತಿದ್ದಾರೆ.

ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಎರಡು ವಾರವಷ್ಟೇ ಇದ್ದ ಲಾಯರ್‌ ಜಗದೀಶ್‌ ಹೆಣ್ಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರು ಎನ್ನುವ ಕಾರಣಕ್ಕೆ ಮನೆಯಿಂದ ಹೊರ ಬಂದಿದ್ದರು. ಆದರೆ ಅವರು ಬಿಗ್‌ ಬಾಸ್‌ ಮನೆಗೆ ಮತ್ತೆ ಬರಬೇಕೆನ್ನುವ ಮಾತುಗಳು ಅವರು ಆಚೆ ಬಂದಾಗಿನಿಂದ ಜೋರಾಗಿ ಕೇಳಿ ಬರುತ್ತಿದೆ. ಜಗದೀಶ್ ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ಬಾಸ್‌ ಬರಬೇಕು ಎಂದು ಅನೇಕರು ಕಮೆಂಟ್‌ ಮೂಲಕ ಈಗಲೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ ಜಗದೀಶ್‌ ಅನೇಕ ಸುದ್ದಿ ವಾಹಿನಿಗಳಿಗೆ ಸಂದರ್ಶನ ನೀಡಿ ಸದ್ದು ಮಾಡುತ್ತಿದ್ದಾರೆ.

ಈ ನಡುವೆ ಜಗದೀಶ್‌ ಅವರು ಮತ್ತೆ ಬಿಗ್‌ ಬಾಸ್‌ ವೇದಿಕೆಗೆ ಬರಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡಿದೆ. ಆದರೆ ಅವರು ಈ ಬಾರಿ ಹೋಗಲಿರುವುದು ಸಲ್ಮಾನ್‌ ಖಾನ್‌ ನಡೆಸಿಕೊಡುತ್ತಿರುವ ಹಿಂದಿ ಬಿಗ್‌ ಬಾಸ್‌ಗೆ.! ಈ ಮಾತು ಎಷ್ಟು ಸತ್ಯ ಎಂದು ಸ್ವಲ್ಪ ದಿನದಲ್ಲೇ ಗೊತ್ತಾಗಲಿದೆ.

See also  ಐಪಿಎಸ್‌ ಅಧಿಕಾರಿಗಳ ದಿಢೀರ್ ವರ್ಗಾವಣೆ! ಪರ-ವಿರೋಧ ಚರ್ಚೆ!
  Ad Widget   Ad Widget   Ad Widget   Ad Widget   Ad Widget   Ad Widget   Ad Widget