ರಾಜ್ಯವೈರಲ್ ನ್ಯೂಸ್ಸಿನಿಮಾ

ಮತ್ತೊಂದು TV ಶೋಗೆ ಲಾಯರ್ ಜಗದೀಶ್ ಎಂಟ್ರಿ..! ಆ ಕಾರ್ಯಕ್ರಮ ಯಾವುದು..? ಇಲ್ಲಿದೆ ಸಂಪೂರ್ಣ ಮಾಹಿತಿ

270

ನ್ಯೂಸ್ ನಾಟೌಟ್: ಲಾಯರ್ ಜಗದೀಶ್ ಬಿಗ್ ಬಾಸ್​ ನಿಂದ ಎಲಿಮಿನೇಟ್ ಆದ ಬಳಿಕ ಅವರ ಅಭಿಮಾನಿಗಳು ಬೇಸರಗೊಂಡಿದ್ದರು. ಈಗ ಅದೇ ಖಾಸಗಿ ವಾಹಿನಿಯ ಮತ್ತೊಂದು ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದಾರೆ.

ಜಗದೀಶ್ ಬಿಗ್ ಬಾಸ್ ​ನಲ್ಲಿ ಎಲ್ಲಾ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಿದ್ದರು. ಈಗ ಅವರನ್ನು ಮತ್ತೆ ಬಿಗ್ ಬಾಸ್ ಗೆ ಕರೆಸಬೇಕು ಎಂಬ ಕೂಗು ಜೋರಾಗಿದೆ. ಹೀಗಿರುವಾಗಲೇ ಅವರು ಕಲರ್ಸ್​ನ ‘ಸಚಿರುಚಿ ಸೀಸನ್ 3’ ಶೋಗೆ ಶೆಫ್ ಆಗಿ ಬಂದಿದ್ದಾರೆ.

ಜಗದೀಶ್ ಅಡುಗೆ ಮಾಡುವುದನ್ನು ತೋರಿಸಲಾಗಿದೆ. ಆ್ಯಂಕರ್ ಜಾಹ್ನವಿ ಅವರು ಜಗದೀಶ್​ ಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪ್ರಶ್ನೆಗಳಲ್ಲಿ ಹೈಲೈಟ್ ಆಗಿದ್ದು ‘ಹಂಸ ಮೇಲೆ ನಿಮಗೆ ಕ್ರಶ್’ ಆಗಿತ್ತಾ ಎಂಬುದು. ಇದಕ್ಕೆ ಜಗದೀಶ್ ಅವರು ನಕ್ಕಿದ್ದಾರೆ. ಜಗದೀಶ್ ಅವರು ನಗುವಿನಲ್ಲೇ ಜನರಿಗೆ ಉತ್ತರ ಸಿಕ್ಕಿದೆ.

‘ಬಿಗ್ ಬಾಸ್ ಪಾಲಿಗೆ ಜಗದೀಶ್ ಮುಗಿದ ಅಧ್ಯಾಯ. ಹಾಗೆ ಕರೆಸೋದಾದರೆ ಹುಚ್ಚ ವೆಂಕಟ್ ಅವರನ್ನೂ ಕರೆಸಬೇಕಾಗುತ್ತದೆ’ ಎಂದು ಸುದೀಪ್ ಹೇಳಿದ್ದರು. ಈ ಮೂಲಕ ಜಗದೀಶ್ ಅವರನ್ನು ಮರಳಿ ಶೋಗೆ ಕರೆಸೋದೇ ಇಲ್ಲ ಎಂದು ಪರೋಕ್ಷವಾಗಿ ಉತ್ತರಿಸಿದಂತಿತ್ತು.

See also  ಜಿಲ್ಲೆಯಲ್ಲಿ 163 ಸೆಕ್ಷನ್ ಜಾರಿ ಇರುವಾಗಲೇ ದ್ವೇಷ ಭಾಷಣ ಆರೋಪ..! ಶಾಸಕ‌ ಹರೀಶ್ ಪೂಂಜಾ ವಿರುದ್ಧ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget