Latestಕ್ರೈಂರಾಜ್ಯ

ಭೂಕುಸಿತ: ಶಿರಸಿ-ಕುಮಟಾ ಸಂಪರ್ಕ ಕಡಿತ..! ರಸ್ತೆ ಕಾಮಗಾರಿಗಾಗಿ ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಲಾಗಿದೆ ಎಂದ ಸ್ಥಳೀಯರು..!

437
Pc Cr: Prajavani

ನ್ಯೂಸ್ ನಾಟೌಟ್: ಶಿರಸಿ ಕುಮಟಾ ಸಂಪರ್ಕ ರಸ್ತೆಯ ದೇವಿಮನೆ ಘಟ್ಟ ಪ್ರದೇಶದಲ್ಲಿ ಭಾನುವಾರ(ಜೂ.15) ಬೆಳಿಗ್ಗೆ ಭೂಕುಸಿತ ಉಂಟಾಗಿ ವಾಹನ ಸಂಚಾರ ಕಡಿತವಾಗಿದೆ. ಕಳೆದೆರಡು ದಿನಗಳ ಅವಧಿಯಲ್ಲಿ ನಡೆದ ಎರಡನೇ ಭೂಕುಸಿತ ಪ್ರಕರಣ ಇದಾಗಿದೆ.

ಶನಿವಾರ ರಾತ್ರಿಯಿಂದ ಹೆಚ್ಚಿರುವ ಮಳೆಯ ಕಾರಣದಿಂದ ಭೂಕುಸಿತ ಸಂಭವಿಸಿದೆ. ಪ್ರಸ್ತುತ ರಸ್ತೆ ನಿರ್ಮಾಣ ಕಂಪನಿಯಿಂದ ತೆರವು ಕಾರ್ಯ ಆರಂಭವಾಗಿದೆ’ ಎಂದು ತಾಲೂಕು ಆಡಳಿತ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಶಿರಸಿ ಹಾಗೂ ಕುಮಟಾ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಗುಡ್ಡಗಳನ್ನು ಅವೈಜ್ಞಾನಿಕವಾಗಿ ಕತ್ತರಿಸಲಾಗಿದೆ. ಈ ಕಾರಣ ಕಳೆದ ಮಳೆಗಾಲದ ಸಂದರ್ಭದಲ್ಲಿಯೂ ಭೂಕುಸಿತ ಉಂಟಾಗಿತ್ತು. ಈ ಬಾರಿ ಮಳೆಗಾಲದ ಆರಂಭದಲ್ಲೇ ಎರಡು ಬಾರಿ ಘಟನೆ ಜರುಗಿದೆ. ಜೋರು ಮಳೆಯಾದರೆ ಇನ್ನಷ್ಟು ಕಡೆ ಅಪಾಯವಾಗುವ ಸಾಧ್ಯತೆಯಿದೆ. ಈ ರಸ್ತೆಯಲ್ಲಿ ಸಂಚರಿಸುವುದು ಎಂದರೆ ಭಯದಲ್ಲೇ ಸಾಗುವಂತಾಗಿದೆ’ ಎಂದು ಸ್ಥಳೀಯರು ಹೇಳಿದ್ದಾರೆ.

ಬ್ರಿಟನ್‌ F-35 ಫೈಟರ್‌ ಜೆಟ್‌ ಕೇರಳದಲ್ಲಿ ತುರ್ತು ಭೂಸ್ಪರ್ಶ..! ಕೇಂದ್ರ ಸರ್ಕಾರದ ಅನುಮತಿಗೆ ಕಾಯುತ್ತಿರುವ ಬ್ರಿಟನ್‌ ಅಧಿಕಾರಿಗಳು..!

See also  ಜೈಲಿನೊಳಗೆ ದರ್ಶನ್ ನ ಬಿಂದಾಸ್ ಲೈಫ್ ನ ವಿಡಿಯೋ, ಫೋಟೋ ವೈರಲ್ ಬೆನ್ನಲ್ಲೇ ಅಧಿಕಾರಿಗಳಿಗೆ ಶಾಕ್..! 7 ಮಂದಿಯನ್ನು ಅಮಾನತ್ತು ಮಾಡಿದ್ದೇವೆ ಎಂದ ಗೃಹ ಸಚಿವ..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget