ದೇಶ-ವಿದೇಶವೈರಲ್ ನ್ಯೂಸ್

ಲಕ್ಷದ್ವೀಪದಲ್ಲಿ ಶಾಖೆ ತೆರೆದ ಮೊದಲ ಖಾಸಗಿ ಬ್ಯಾಂಕ್‌ ಎಚ್‌ಡಿಎಫ್‌ಸಿ, ಇಂದಿನಿಂದ(ಎ.10) ಕಾರ್ಯಾರಂಭ

ನ್ಯೂಸ್ ನಾಟೌಟ್: ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್‌ ಎಚ್‌ಡಿಎಫ್‌ಸಿ ಲಕ್ಷದ್ವೀಪದ ಕವರಟ್ಟಿಯಲ್ಲಿ ಬುಧವಾರ(ಎ.10) ತನ್ನ ಮೊದಲ ಶಾಖೆ ತೆರೆದಿದೆ. ಈ ಮೂಲಕ ಲಕ್ಷದ್ವೀಪದಲ್ಲಿ ಶಾಖೆ ತೆರೆದ ಮೊದಲ ಖಾಸಗಿ ಬ್ಯಾಂಕ್‌ ಎನಿಸಿಕೊಂಡಿದೆ.

‘ಜನರು ಎಲ್ಲಿರುತ್ತಾರೋ ಅಲ್ಲಿಯೇ ಸೇವೆಯನ್ನು ಒದಗಿಸಬೇಕು ಎನ್ನುವುದು ನಮ್ಮ ಬ್ಯಾಂಕ್‌ನ ಉದ್ದೇಶ. ಲಕ್ಷದ್ವೀಪದಲ್ಲಿರುವ ವ್ಯಕ್ತಿಗಳಿಗೆ, ಕುಟುಂಬಗಳಿಗೆ ಹಾಗೂ ಉದ್ಯಮದಾರರಿಗೆ ಸೇವೆಯನ್ನು ನೀಡಲು ಉತ್ಸುಕರಾಗಿದ್ದೇವೆ’ ಎಂದು ಬ್ಯಾಂಕ್‌ನ ಮುಖ್ಯಸ್ಥ ಎಸ್‌. ಸಂಪತ್‌ಕುಮಾರ್‌ ತಿಳಿಸಿದ್ದಾರೆ. ಭಾರತೀಯ ನೌಕಾಪಡೆಯ ಕಮಾಂಡಿಂಗ್‌ ಅಧಿಕಾರಿ ಕ್ಯಾಪ್ಟನ್‌ ಲವಕೇಶ್‌ ಅವರು ಲಕ್ಷ್ಯದ್ವೀಪದಲ್ಲಿ ಕಾರ್ಯಾರಂಭ ಮಾಡಿದ ಎಚ್‌ಡಿಎಫ್‌ಸಿಯ ಮೊದಲ ಶಾಖೆಗೆ ಚಾಲನೆ ನೀಡಿದರು. ಈ ವೇಳೆ ಬ್ಯಾಂಕ್‌ನ ಇತರ ಅಧಿಕಾರಿಗಳು ಹಾಜರಿದ್ದರು ಎಂದು ವರದಿಯಾಗಿದೆ.

Related posts

ಕಡಲ್ಗಳ್ಳರಿಂದ ಒತ್ತೆಯಾಳುಗಳನ್ನು ರಕ್ಷಿಸಿದ ಭಾರತೀಯ ನೌಕಾಪಡೆ..! 40 ಗಂಟೆಗಳ ಕಾಲ ಸಮುದ್ರದಲ್ಲಿ ನಡೆದ ಹೋರಾಟ ಹೇಗಿತ್ತು..?

ಹಠಾತ್ ಹೃದಯಾಘಾತ ತಪ್ಪಿಸಲು ಬರುತ್ತಿದೆ ಪುನಿತ್​ ರಾಜ್​ಕುಮಾರ್​​ ಯೋಜನೆ? ಈ ಯೋಜನೆ ಮೂಲಕ ಹೃದಯಾಘಾತ ತಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಸೌಜನ್ಯ ಕೊಲೆ ಪ್ರಕರಣ, ಸಂತೋಷ್‌ ರಾವ್ ಕುಟುಂಬದ ಕ್ಷಮೆಯಾಚನೆ, ಸಂತೋಷ್ ರಾವ್ ತಂದೆಗೆ ಹೊಸ ಬಟ್ಟೆ ತೊಡಿಸಿ ಪಾದಪೂಜೆ ಮಾಡಿದ ತಿಮರೋಡಿ ಬಳಗ