ಕ್ರೈಂರಾಜ್ಯ

ಕೆರೆಗೆ ಈಜಲು ಹೋದ ಮಕ್ಕಳು ನೀರುಪಾಲು..! ಅಗ್ನಿಶಾಮಕ ದಳದಿಂದ ತೀವ್ರ ಶೋಧ

195

ನ್ಯೂಸ್ ನಾಟೌಟ್: ಕೆರೆಯಲ್ಲಿ ಈಜಲು ಹೋಗಿದ್ದ ಐವರ ಪೈಕಿ ನಾಲ್ವರು ಬಾಲಕರು ನೀರು ಪಾಲಾದ ಘಟನೆ ಹಾಸನದ ಆಲೂರು ತಾಲೂಕಿನ ಕದಾಳು ಸಮೀಪದ ಮುತ್ತಿಗೆ ಗ್ರಾಮದಲ್ಲಿ ಗುರುವಾರ(ಮೇ.16) ನಡೆದಿದೆ. ಮುತ್ತಿಗೆ ಗ್ರಾಮದ ಜೀವನ್ (13 ವ), ಸಾತ್ವಿಕ್ (11 ವ), ವಿಶ್ವ ಹಾಗೂ ಪೃಥ್ವಿ (12 ವ) ಮೃತ ಬಾಲಕರು. ಚಿರಾಗ್ (10 ವ) ಬದುಕುಳಿದಿದ್ದು ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಾಲೆಗೆ ರಜೆ ಇರುವುದರಿಂದ ಮಕ್ಕಳು ಈಜಲು ಹೋಗಿದ್ದರು. ಕೆರೆಯಲ್ಲಿ ಒಬ್ಬರನ್ನೊಬ್ಬರು ರಕ್ಷಿಸುವ ಪ್ರಯತ್ನ ಮಾಡಿ ಮುಳುಗಿದ್ದಾರೆ ಎನ್ನಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು, ಶವಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Click 👇

https://newsnotout.com/2024/05/baby-in-car-and-marriage-function
https://newsnotout.com/2024/05/world-cup-and-kmf-sponsership
https://newsnotout.com/2024/05/narendra-modi-and-comedian-in-varanasi
See also  ಬಿಜೆಪಿಯಿಂದ ಇಬ್ಬರು ಶಾಸಕರು 6 ವರ್ಷಗಳ ಕಾಲ ಉಚ್ಚಾಟನೆ..! ನಿರ್ಧಾರವನ್ನು ಸ್ವಾಗತಿಸಿದ ಬಿ.ವೈ. ವಿಜಯೇಂದ್ರ‌..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget