ನ್ಯೂಸ್ ನಾಟೌಟ್: ಕಲಾವಿದರಿಗೆ ಅಭಿಮಾನಿಗಳು ಮತ್ತು ಕೆಲವೊಮ್ಮೆ ಸಿನಿಮಾ ನಿರ್ದೇಶಕರು ಪ್ರೀತಿಯಿಂದ ಬಿರುದು ನೀಡುತ್ತಾರೆ.
ಕಿಚ್ಚ ಸುದೀಪ್ ಅವರಿಗೆ ʼಬಾದ್ ಷಾʼ, ʼಅಭಿನಯ ಚಕ್ರವರ್ತಿʼ ಎಂದು ಕರೆಯುತ್ತಾರೆ. ಶಿವಣ್ಣ ಅವರಿಗೆ ʼಸೆಂಚುರಿ ಸ್ಟಾರ್ʼ, ದರ್ಶನ್ ಅವರಿಗೆ ʼಚಾಲೆಂಜಿಂಗ್ ಸ್ಟಾರ್ʼಇನ್ನೂ ಹಲವರಿಗೆ ಇಂತಹ ಬಿರುದುಗಳಿವೆ. ಈ ಹಿಂದೆ ಕಮಲ್ ಹಾಸನ್ ತಮ್ಮನ್ನು ʼಉಳಗನಾಯಗನ್ʼ ಎಂದು ಕರೆಯಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಅಜಿತ್ ತಮಗೆ ʼಥಲಾʼ ಎಂದು ಕರೆಯಬೇಡಿ ಎಂದು ಮನವಿ ಮಾಡಿದ್ದರು.
ಇದೀಗ ಮತ್ತೊಬ್ಬ ಸ್ಟಾರ್ ನಟಿಯೊಬ್ಬರು ತಮಗೆ ಬಿರುದು ಬೇಡ ತಮ್ಮ ಹೆಸರಿನಿಂದ ಕರೆದರೆ ಸಾಕು ಎಂದು ಅಭಿಮಾನಿಗಳಲ್ಲಿ ಪತ್ರ ಬರೆದು ಮನವಿ ಮಾಡಿದ್ದಾರೆ. ಬಹುಭಾಷಾ ನಟಿ ನಯನತಾರಾ (Nayanthara) ತಮ್ಮನ್ನು ʼಲೇಡಿ ಸೂಪರ್ ಸ್ಟಾರ್ʼ ಎಂದು ಕರೆಯಬೇಡಿ ಎಂದು ಅಭಿಮಾನಿಗಳಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
“ನನ್ನ ಜೀವನ ನಿಮ್ಮ ಪ್ರೀತಿ – ಪ್ರೋತ್ಸಾಹದಿಂದ ತೆರೆದಿರುವ ಪುಸ್ತಕವಾಗಿದೆ. ಯಶಸ್ಸಿನ ಸಮಯದಲ್ಲಿ ಭುಜ ತಟ್ಟಿದ್ದೀರಿ. ಕಷ್ಟದ ಸಮಯದಲ್ಲಿದ್ದಾಗ ನನ್ನ ಕೈ ಹಿಡಿದು ಮೇಲಕ್ಕೆ ಎತ್ತಲು ಸಹಕರಿಸುತ್ತಾ ಯಾವಾಗಲೂ ನನ್ನ ಜತೆಯೇ ನಿಂತಿದ್ದೀರಿ. ನನ್ನನ್ನು ನಿಮ್ಮಲ್ಲಿ ಅನೇಕರು ʼಲೇಡಿ ಸೂಪರ್ ಸ್ಟಾರ್ʼ ಎಂದು ಕರೆಯುತ್ತೀರಿ. ಅದು ನೀವು ನನಗೆ ಪ್ರೀತಿಯಿಂದ ಕೊಟ್ಟ ಬಿರುದು. ಅದಕ್ಕೆ ನಾನು ಚಿರಋಣಿ ಆಗಿದ್ದೇನೆ. ದಯವಿಟ್ಟು ನೀವು ನನ್ನನ್ನು ನಯನತಾರಾ ಎಂದು ನನ್ನ ಹೆಸರಿಟ್ಟೇ ಕರೆಯಿರಿ. ಅದು ಮನಸ್ಸಿಗೆ ತುಂಬಾ ಆಪ್ತವಾದ ಹೆಸರು. ಇದು ಒಬ್ಬ ಕಲಾವಿದೆಯಾಗಿ ಮಾತ್ರವಲ್ಲದೆ ಒಬ್ಬ ವ್ಯಕ್ತಿಯಾಗಿಯೂ ನಾನು ಯಾರೆಂದು ಪ್ರತಿನಿಧಿಸುತ್ತದೆ. ಬಿರುದುಗಳು ಶ್ರೇಷ್ಠವಾದದ್ದು. ಆದರೆ ಕೆಲವೊಮ್ಮೆ ಈ ಬಿರುದುಗಳು ನಮ್ಮ ಕೆಲಸ ಹಾಗೂ ಪ್ರೇಕ್ಷಕರೊಂದಿಗೆ ನಾವು ಹಂಚಿಕೊಳ್ಳುವ ಬಂಧವನ್ನು ಬೇರ್ಪಡಿಸುತ್ತದೆ” ಎಂದು ನಯನತಾರಾ ಪತ್ರದಲ್ಲಿ ಹೇಳಿದ್ದಾರೆ.
NAYANTHARA will always be and only NAYANTHARA🙏🏻 pic.twitter.com/fZDqhXM4Vl
— Nayanthara✨ (@NayantharaU) March 4, 2025
ನಯನತಾರಾ ಮುಂದೆ ರಾಕಿಂಗ್ ಸ್ಟಾರ್ ಯಶ್ ಅವರ ʼಟಾಕ್ಸಿಕ್ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಮಂಗಳೂರು-ಉಡುಪಿ ನಡುವೆ ಮೆಟ್ರೋ ತರಲು ಸರ್ಕಾರದ ಪ್ಲಾನ್..! ದ.ಕ. ಮತ್ತು ಉಡುಪಿ ಜಿಲ್ಲಾಧಿಕಾರಿಗಳಿಗೆ ಪತ್ರ..!