Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಲೇಡಿ ಸಬ್ ಇನ್ಸ್‌ ಪೆಕ್ಟರ್ ಬರೆದ ರಜಾ ಅರ್ಜಿಯಲ್ಲಿ ಸಿಕ್ಕಾಪಟ್ಟೆ ಸ್ಪೆಲ್ಲಿಂಗ್​ ಮಿಸ್ಟೆಕ್ ಕಂಡು ಅಧಿಕಾರಿಗಳಿಗೆ ಶಾಕ್..! ತನಿಖೆಯ ಬಳಿಕ ಆಕೆ ಅರೆಸ್ಟ್..!

1.4k

ನ್ಯೂಸ್‌ ನಾಟೌಟ್: ಲೇಡಿ ಸಬ್-ಇನ್ಸ್‌ಪೆಕ್ಟರ್ (SI) ಒಬ್ಬರು, ರಜೆ ಅರ್ಜಿ ಬರೆದು ಸಿಕ್ಕಿ ಹಾಕಿಕೊಂಡ ಘಟನೆಯೊಂದು ರಾಜಸ್ಥಾನದ ಜುಂಜುನುವಿನಲ್ಲಿ ನಡೆದಿದೆ.

ಕೆಲಸದಿಂದಲೇ ವಜಾಗೊಳ್ಳುವ ಪರಿಸ್ಥಿತಿ ಎದುರಾಗಿದೆ. ಸದ್ಯ ಈಕೆಯನ್ನು ಬಂಧಿಸಲಾಗಿದೆ.​ ಈಕೆ ಬರೆದಿರುವ ರಜಾ ಚೀಟಿಯಲ್ಲಿ ಸಿಕ್ಕಾಪಟ್ಟೆ ಹಿಂದಿಯ ಕಾಗುಣಿತ ದೋಷ ಅಂದ್ರೆ ಸ್ಪೆಲ್ಲಿಂಗ್​ ಮಿಸ್ಟೆಕ್​ ಇತ್ತು. ರಜಾ ಚೀಟಿಯಲ್ಲಿನ ಕಾಗುಣಿತ ದೋಷದಿಂದಾಗಿ ಈ ಸಬ್​ ಇನ್ಸ್ ​ಪೆಕ್ಟರ್​ ಅಸಲಿಯತ್ತು ಬಯಲಾಗಿರುವ ಕಾರಣ ಕೆಲಸದಿಂದ ವಜಾಗೊಳ್ಳುವ ಹಾಗಾಗಿದೆ.

ಸಬ್-ಇನ್ಸ್‌ಪೆಕ್ಟರ್​ ಹೆಸರು ಮೋನಿಕಾ. ಇವರು ರಜೆಗಾಗಿ ಬರೆದಿದ್ದ ಚೀಟಿಯಲ್ಲಿ ಸಿಕ್ಕಾಪಟ್ಟೆ ತಪ್ಪು ಇದ್ದದ್ದು ನೋಡಿ ಅಲ್ಲಿರುವ ಹಿರಿಯ ಅಧಿಕಾರಿಗಳಿಗೆ ಡೌಟ್​ ಬಂದಿದೆ. ಇಷ್ಟೆಲ್ಲಾ ತಪ್ಪು ಬರೆದಿರುವಾಕೆ ಅತ್ಯಧಿಕ ಅಂಕ ಗಳಿಸಿ, ಪರೀಕ್ಷೆ ಪಾಸಾದದ್ದು ಹೇಗೆ ಎನ್ನುವ ಅನುಮಾನ ಕಾಡಿದೆ. ಪೊಲೀಸ್ ಪರೀಕ್ಷೆಯಲ್ಲಿ ಮೋನಿಕಾ ಹಿಂದಿಯಲ್ಲಿ 200ರಲ್ಲಿ184 ಮತ್ತು ಸಾಮಾನ್ಯ ಜ್ಞಾನದಲ್ಲಿ 161 ಅಂಕಗಳನ್ನು ಗಳಿಸಿದ್ದರು, ಆದರೆ ಸಂದರ್ಶನದಲ್ಲಿ ಕೇವಲ 15 ಅಂಕಗಳನ್ನು ಪಡೆದಿದ್ದರು.

ಆದರೆ ಪರೀಕ್ಷೆಗಳ ಅಂಕದ ಮೇಲೆ ಕೆಲಸ ಗಿಟ್ಟಿಸಿಕೊಂಡಿದ್ದರು ಎನ್ನಲಾಗಿದೆ. ಈ ರಜಾ ಅರ್ಜಿ ಕಂಡು ಅಲ್ಲಿರುವ ಹಿರಿಯ ಅಧಿಕಾರಿಗಳಿಗೆ ಎಲ್ಲೋ ಏನೋ ಎಡವಟ್ಟಾಗಿದೆ ಎಂದು ಎನ್ನಿಸಿದೆ.

ಕೊನೆಗೆ ಆಂತರಿಕ ತನಿಖೆ ಮಾಡಿದಾಗ ಸತ್ಯಾಂಶ ಬಯಲಾಗಿದೆ. ಮೋನಿಕಾ 2021 ರ ಸಬ್​ ಇನ್ಸ್ ​ಪೆಕ್ಟರ್​ ನೇಮಕಾತಿ ಪರೀಕ್ಷೆಯಲ್ಲಿ ನಕಲು ಮಾಡಲು ಬ್ಲೂಟೂತ್ ಸಾಧನವನ್ನು ಬಳಸಿ ಅಷ್ಟು ಅಂಕ ಗಳಿಸಿದ್ದರು ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ. ಅವರಿಗೆ ಅವರು ಪರೀಕ್ಷಾ ವಂಚನೆಗಾಗಿ 15 ಲಕ್ಷ ರೂಪಾಯಿ ಲಂಚ ಕೊಟ್ಟಿರುವುದೂ ಬೆಳಕಿಗೆ ಬಂದಿದೆ.

ವಿಶೇಷ ಕಾರ್ಯಾಚರಣೆ ಗುಂಪು (SOG) ಮೋನಿಕಾ ಮತ್ತು ಆಕೆಯ ಸಹಚರ ಪೌರವ್ ಕಲಿರ್ ಇಬ್ಬರನ್ನೂ ಬಂಧಿಸಿದೆ. ಸದ್ಯ ತನಿಖೆ ನಡೆಯುತ್ತಿದ್ದು, ಇದರ ಆಧಾರದ ಮೇಲೆ, ಆರೋಪ ಸಾಬೀತಾದರೆ ಮೋನಿಕಾ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿರೋಗಿಗಳ ವೇಷದಲ್ಲಿ ಆಸ್ಪತ್ರೆಗೆ ನುಗ್ಗಿ ವೈದ್ಯೆಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು..! ಈ ಬಗ್ಗೆ ಪೊಲೀಸರು ಹೇಳಿದ್ದೇನು..?

 

See also  ಎಚ್ಚರ..! ಮಂಗಳೂರು ಪೊಲೀಸ್ ಕಮಿಷನರ್ ಹೆಸರಲ್ಲೇ ವಾಟ್ಸಾಪ್ ಸಂದೇಶ..! ಹಣಕ್ಕೆ ಬೇಡಿಕೆ ಇಟ್ಟವರ ಬಗ್ಗೆ ಐಪಿಎಸ್ ಅನುಪಮ್ ಅಗರ್ವಾಲ್ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget     Ad Widget   Ad Widget   Ad Widget   Ad Widget