ಕರಾವಳಿಕೊಡಗುಪುತ್ತೂರು

ಉಡುಪಿ:ಕಸದ ರಾಶಿಯಲ್ಲಿ ಸಿಕ್ಕಿತು ಚಿನ್ನದುಂಗುರ..ಕೈಗೆ ಸಿಕ್ಕಿದ ಸ್ವರ್ಣವನ್ನು ಪೌರಕಾರ್ಮಿಕೆ ಮಾಡಿದ್ದೇನು ಗೊತ್ತಾ?

261

ನ್ಯೂಸ್ ನಾಟೌಟ್ :ಇತ್ತೀಚಿನ ದಿನಗಳಲ್ಲಿ ಪ್ರಾಮಾಣಿಕರಿರುವುದೇ ಬೆರಳಿಕೆಯಷ್ಟು ಮಂದಿ.ಕಳೆದು ಹೋದ ಅಮೂಲ್ಯ ವಸ್ತುಗಳು ವಾಪಾಸ್ ಕೈ ಸೇರುವ ಯಾವುದೇ ಗ್ಯಾರಂಟಿಯಿಲ್ಲ.ಇಲ್ಲೊಬ್ಬ ಮಹಿಳೆ ಅದೆಲ್ಲದಕ್ಕು ತದ್ವಿರುದ್ದವಾಗಿ ನಿಲ್ಲುತ್ತಾರೆ.ಸ್ವಚ್ಚತಾ ಕಾರ್ಮಿಕೆಯಾಗಿರುವ ಇವರು ಕಸದೊಂದಿಗೆ ಸಿಕ್ಕಿರುವ ಚಿನ್ನದುಂಗುರವನ್ನು ವಾರೀಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.

ಈ ಒಂದು ಅಪರೂಪದ ಘಟನೆ ನಡೆದಿದ್ದು, ಉಡುಪಿಯಲ್ಲಿ. ಶಂಕರನಾರಾಯಣ ಗ್ರಾಮ ಪಂಚಾಯತ್‌ನ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಸ್ವಚ್ಚತಾ ಗಾರರಾದ ದೇವಕಿ ಅವರಿಗೆ ಘನ ತ್ಯಾಜ್ಯ ದಲ್ಲಿ ಚಿನ್ನದ ಉಂಗುರ ಸಿಕ್ಕಿದೆ. ಅದನ್ನುವಾರೀಸುದಾರರಿಗೆ ಅವರು ಹಿಂದಿರುಗಿಸಿದ್ದಾರೆ.ಪ್ರತಿದಿನವೂ ಕಸ ನೀಡುವ ಮನೆಯವರ 2 ಗ್ರಾಂ ತೂಕದ ಚಿನ್ನ ಉಂಗುರ ಕಳೆದು ಹೋಗಿತ್ತು.ಈ ಬಗ್ಗೆ ಚಿನ್ನದ ಉಂಗುರ ಯಾರಿಗಾದರೂ ಸಿಕ್ಕರೆ ವಾಪಾಸ್ ನೀಡುವಂತೆ ಮನವಿ ಮಾಡಿದ್ದರು.

ಈ ಬಗ್ಗೆ ಕಸ ವಿಲೇವಾರಿ ಘಟಕದವರಿಗೆ ಮಾಹಿತಿ ನೀಡಿದಾಗ, ಕಸದ ಜೊತೆ ಬಂದಿದ್ದರೆ ನೀಡುವಂತೆ ಕೇಳಿಕೊಂಡಿದ್ದರು. ಅದರಂತೆ ಬೈಲೂರು ಮೂಡುಬೈಲೂರಿನಲ್ಲಿ ಕಸ ವಿಲೇವಾರಿ ಮಾಡುವಾಗ ಕಸದಲ್ಲಿ ಚಿನ್ನದ ಉಂಗುರ ದೇವಕಿ ಅವರಿಗೆ ಸಿಕ್ಕಿತ್ತು. ಕೂಡಲೇ ಅವರು ಸಂಬಂಧಪಟ್ಟ ಮನೆಯವರಿಗೆ ಮಾಹಿತಿ ನೀಡಿ ವಾರೀಸುದಾರ ಕುಶಾಲ್ ಕೊಠಾರಿ ಅವರಿಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿದು ಬಂದಿದೆ.

See also  ಊರುಬೈಲು: ನಿಲ್ಲದ ಒಂಟಿ ಆನೆ ಕಾಟ, ಪ್ರತಿ ದಿನವೂ ತೋಟಗಳಿಗೆ ಹಾನಿ, ಮೌನವಾಗಿರುವ ಅರಣ್ಯ ಇಲಾಖೆ
  Ad Widget     Ad Widget   Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget