ಕರಾವಳಿ

ಕೆವಿಜಿ ವೈದ್ಯಕೀಯ ಕಾಲೇಜಿನಲ್ಲಿ ‘ಮಣ್ಣು ಉಳಿಸಿ’ ಅಭಿಯಾನ

553

ನ್ಯೂಸ್ ನಾಟೌಟ್: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಕೆವಿಜಿ ಶಿಕ್ಷಣ ಸಂಸ್ಥೆಗಳೊಂದಿಗೆ ಸೆ.೧೨ರಂದು ಸುಳ್ಯದಲ್ಲಿ ‘ಮಣ್ಣು ಉಳಿಸಿ’ ಜನ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಮಣ್ಣು ಉಳಿಸಿ ಅಭಿಯಾನದಲ್ಲಿ ಭಾಗಿಯಾಗಿರುವ ಕೋಲ್ಕತ್ತ ಮೂಲದ ಸಾಹಿಲ್ ಅವರಿಗೆ ಸನ್ಮಾನಿಸಲಾಯಿತು. ಕೇವಲ ಹದಿನೇಳು ವರ್ಷದ ಸಾಹಿಲ್ ಕಳೆದ ಒಂದೂವರೇ ವರ್ಷಗಳಿಂದ ಮಣ್ಣು ಉಳಿಸಿ ಅಭಿಯಾನದ ಭಾಗವಾಗಿ ಒಟ್ಟು ೨೫,೦೦೦ ಕಿ.ಮೀ ಕ್ರಮಿಸಿದ್ದಾರೆ.

ವಿವಿಧ ರಾಜ್ಯಗಳಲ್ಲಿ ಸೈಕಲ್ ಸವಾರಿ ಮೂಲಕ ಮಣ್ಣಿನ ಮಹತ್ವವನ್ನು ಸಾರಿದ್ದಾರೆ. ಸುಳ್ಯದಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು, ಮಣ್ಣು ಜನ ಜೀವನಕ್ಕೆ ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಪ್ರಪಂಚದ ಶೇ.೫೨ರಷ್ಟು ಮಣ್ಣು ಹಾಳಾಗಿದೆ. ಇದನ್ನು ಸರಿಪಡಿಸುವ ಕೆಲಸ ಆಗಬೇಕಿದೆ. ಇದಕ್ಕೆ ನೀವೆಲ್ಲರೂ ಕೈ ಜೋಡಿಸಬೇಕಿದೆ ಎಂದು ಸಾಹಿಲ್ ತಿಳಿಸಿದರು. ಈ ಸಂದರ್ಭದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ನಿರ್ದೇಶಕರು, ಕೆವಿಜಿ ಅಲೈಡ್ ಹೆಲ್ತ್ ಸೈನ್ಸ್ ಪ್ರಾಂಶುಪಾಲರಾದ ಡಾ.ಐಶ್ವರ್ಯ ಕೆಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯದ ಮತ್ತು ಆಸ್ಪತ್ರೆ ಇದರ ಡೀನ್ ಡಾ ನೀಲಾಂಬಿಕೆ ನಟರಾಜನ್ ಉಪಸ್ಥಿತರಿದ್ದರು. ೧೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

See also  ಸುಳ್ಯ ಕಾಲೇಜಿನಲ್ಲಿ ಅನ್ಯಕೋಮಿನ ಹುಡುಗ-ಹುಡುಗಿ ಲಲ್ವಿಡವ್ವಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget