ನ್ಯೂಸ್ ನಾಟೌಟ್: ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ(ರಿ.)ದಿಂದ “ಸುಳ್ಯ ಕೆವಿಜಿ ಸುಳ್ಯ ಹಬ್ಬ ಆಚರಣೆ 2024″ರ ಡಾ| ಕುರುಂಜಿ ವೆಂಕಟರಮಣ ಗೌಡರ 96ನೇ ಜಯಂತ್ಯೋತ್ಸವದ ಅಂಗವಾಗಿ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳ ಉದ್ಘಾಟನಾ ಸಮಾರಂಭ ಡಿ.25ರ ಬುಧವಾರ ಕೆ.ವಿ.ಜಿ ಕಾನೂನು ಕಾಲೇಜಿನ ಮುಂಭಾದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು “ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ(ರಿ.) ಸುಳ್ಯ” ಇದರ ಅಧ್ಯಕ್ಷ ಡಾ.ಎನ್.ಎ ಜ್ಞಾನೇಶ್ ವಹಿಸಿದ್ದರು. ಶ್ರೀ ಚೆನ್ನಕೇಶವ ದೇವಸ್ಥಾನ ಸುಳ್ಯ ಇದರ ಅನುವಂಶಿಕ ಮೊಕ್ತೇಸರರಾದ ಡಾ.ಹರಪ್ರಸಾದ್ ತುದಿಯಡ್ಕ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗೌರವ ಅತಿಥಿಯಾಗಿ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ(ರಿ.) ಸುಳ್ಯ ಇದರ ಗೌರವಾಧ್ಯಕ್ಷರು ಹಾಗೂ ಎ.ಒ.ಎಲ್.ಇ(ರಿ.) ಸುಳ್ಯ ಇದರ ಅಧ್ಯಕ್ಷರಾದ ಡಾ ಕೆ ವಿ ಚಿದಾನಂದ ವಹಿಸಿದ್ದರು, ಅವರು ಮಾತನಾಡಿ ಪ್ರತಿ ಮನೆಯಲ್ಲಿ ತಮ್ಮ ಮಕ್ಕಳಲ್ಲಿ ಕ್ರೀಡಾ ಸ್ಪೂರ್ತಿ ಹಾಗೂ ಸ್ಪರ್ಧಾ ಸ್ಪೂರ್ತಿಯನ್ನು ಬೆಳೆಸಬೇಕು. ಅದಕ್ಕೆ ಪೂರಕವಾಗಿ ಪೂಜ್ಯ ತಂದೆಯಯವರಾದ ಕುರುಂಜಿ ವೆಂಕಟರಮಣ ಗೌಡರ ನೆನಪಿನಲ್ಲಿ ನಡೆಸುವ ಸುಳ್ಯ ಹಬ್ಬದಂತಹ ಕಾರ್ಯಕ್ರಮಗಳು ಎಲ್ಲರ ಜೀವನಕ್ಕೂ ಸ್ಪೂರ್ತಿ ತುಂಬುತ್ತದೆ ಎಂದರು.
ಬಳಿಕ ವೇಗ ನಡಿಗೆಯ ರಾಷ್ಟ್ರೀಯ ಕ್ರೀಡಾಪಟು ಸುಬ್ರಹ್ಮಣ್ಯ ಕಾಣಿಯೂರು ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ರೀಡೆ ಮಕ್ಕಳ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಲು ಬಹಳ ಸಹಾಯಕಾರಿ. ಈ ನಿಟ್ಟಿನಲ್ಲಿ ಕೆವಿಜಿ ಸುಳ್ಯ ಹಬ್ಬ ಕ್ರೀಡೆಗೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಹಳ ಒತ್ತು ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಈ ಸಂದರ್ಭ ವೇದಿಕೆಯಲ್ಲಿ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ(ರಿ.) ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಕೆ.ರಾಜು ಪಂಡಿತ್, ಕೋಶಾಧಿಕಾರಿ ಶ್ರೀಕೃಷ್ಣ ಸೋಮಯಾಗಿ, ನಿಕಟಪೂರ್ವ ಅಧ್ಯಕ್ಷರಾದ ದೊಡ್ಡಣ್ಣ ಬರಮೇಲು, ಚಂದ್ರಶೇಖರ್ ಪೇರಾಲು, ಎನ್ನೆಂಸಿ ಸುಳ್ಯ ಪ್ರಾಂಶುಪಾಲರಾದ ರುದ್ರ ಕುಮಾರ್ ಎಂ ಎಂ ಉಪಸ್ಥಿತರಿದ್ದರು.
ಸ್ಪರ್ಧಾ ಸಮಿತಿಯ ಸಂಚಾಲಕರಾದ ಉಷಾ ಪೇರಾಲು ಸ್ವಾಗತಿಸಿದರು, ಕ್ರೀಡಾ ಸಮಿತಿಯ ಸಂಚಾಲಕರಾದ ಎ.ಸಿ ವಸಂತ್ ಧನ್ಯವಾದಗೈದರು. ವೀರಪ್ಪ ಕಣ್ಕಲ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಿತು. ಡಾ| ಕುರುಂಜಿ ವೆಂಕಟರಮಣ ಗೌಡರ ಜನ್ಮದಿನದ ನೆನಪಿಗಾಗಿ ನಾಳೆ ಡಿ. 26 ರ ಗುರುವಾರದಂದು ಹಲವಾರು ವಿಶೇಷ ಕಾರ್ಯಕ್ರಮಗಳು ನಡೆಯಲಿದೆ.