ಕರಾವಳಿಸುಳ್ಯ

ಸುಳ್ಯ:ಡಾ.ಕೆ.ವಿ.ಜಿಯವರ 95ನೇ ಹುಟ್ಟು ಹಬ್ಬದ ಸ್ಮರಣಾರ್ಥ ಹಾನಿಗೀಡಾದ ಮನೆಗೆ ಹಣ ಹಸ್ತಾಂತರ,ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ (ರಿ) ಸುಳ್ಯ ವತಿಯಿಂದ ಕಾರ್ಯ

265

ನ್ಯೂಸ್ ನಾಟೌಟ್ : ಡಾ| ಕುರುಂಜಿ ವೆಂಕಟ್ರಮಣ ಗೌಡರ ೯೫ನೇ ಹುಟ್ಟು ಹಬ್ಬದ ಸವಿನೆನಪಿಗಾಗಿ ಸಮಾಜ ಸೇವಾ ಕಾರ್ಯದಡಿಯಲ್ಲಿ ಪ್ರಕೃತಿ ವಿಕೋಪಕ್ಕೆ ಹಾನಿಗೀಡಾದ ಸರೋಜಾ ಆರ್. ಚೆಂಡೆಮೂಲೆ ಜಯನಗರ ಇವರ ಮನೆಯನ್ನು ಪೂರ್ತಿಗೊಳಿಸಲು ರೂ. ೫೦,೦೦೦ ವನ್ನು ಹಸ್ತಾಂತರಿಸಲಾಯಿತು.ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ (ರಿ) ಸುಳ್ಯ ಇದರ ವತಿಯಿಂದ ಈ ಕಾರ್ಯಕ್ರಮ ನಡೆಯಿತು.

ಸುಳ್ಯ ಹಬ್ಬದ ಸ್ಥಾಪಕಾಧ್ಯಕ್ಷ ಜಯಪ್ರಕಾಶ್ ರೈ ಇವರು ಹಸ್ತಾಂತರ ಹಣವನ್ನು ಹಸ್ತಾಂತರ ಮಾಡಿದ್ದು, ಶೀಘ್ರವೆ ಮನೆಯನ್ನು ಪೂರ್ತಿಗೊಳಿಸಲು ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಪೇರಾಲ್ ವಹಿಸಿದರು. ಕಾರ್ಯಕ್ರಮದಲ್ಲಿ ನಗರ ಪಂಚಾಯತ್ ಸದಸ್ಯ ಬಾಲಕೃಷ್ಣ ಕೊಡೆಂಕಿರಿ , ಪತ್ರಕರ್ತ ಹರೀಶ್ ಬಂಟ್ವಾಳ್, ಪೂರ್ವಾಧ್ಯಕ್ಷ ದೊಡ್ಡಣ್ಣ ಬರಮೇಲು, ಕಾರ್ಯದರ್ಶಿ ದಿನೇಶ್ ಅಂಬೆಕಲ್ಲು,ಕೋಶಾಧಿಕಾರಿ ಜನಾರ್ದನ್ ನಾಯ್ಕ್, ಆನಂದ ಖಂಡಿಗ, ಚಂದ್ರಾಕ್ಷಿ ರೈ,ಪ್ರಭಾಕರನ್ ನಾಯರ್ ಉಪಸ್ಥಿತರಿದ್ದರು. ಸಮಾಜ ಸೇವಾ ವಿಭಾಗದ ಸಂಚಾಲಕರಾದ ಡಾ. ಜ್ಞಾನೇಶ್ ಎನ್.ಎ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

See also  ಮಣಿಪಾಲ: ಗಾಂಜಾ ಸೇವಿಸಿದ ಐವರು ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget