Latestಕರಾವಳಿಕೆವಿಜಿ ಕ್ಯಾಂಪಸ್‌ಸುಳ್ಯ

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅಂತರಾಷ್ಟ್ರೀಯ ಅಪಸ್ಮಾರ ದಿನ 2025-ವಿಶೇಷ ಜಾಗೃತಿ ಕಾರ್ಯಕ್ರಮ

330
Spread the love

ನ್ಯೂಸ್ ನಾಟೌಟ್: ಅಂತರರಾಷ್ಟ್ರೀಯ ಅಪಸ್ಮಾರ ದಿನ (IED) 2015 ರಿಂದ ಪ್ರತಿ ವರ್ಷ ಫೆಬ್ರವರಿ 2 ನೇ ಸೋಮವಾರದಂದು ಆಚರಿಸಲಾಗುವ ಜಾಗತಿಕ ಆರೋಗ್ಯ ರಕ್ಷಣಾ ಕಾರ್ಯಕ್ರಮವಾಗಿದೆ.ಈ ವರ್ಷ 2025,ಅಂತರಾಷ್ಟ್ರೀಯ ಅಪಸ್ಮಾರ ದಿನವನ್ನು ಫೆಬ್ರವರಿ 10ರಂದು ಆಚರಿಸಲಾಯಿತು.

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರೋಗ ಲಕ್ಷಣ ವಿಭಾಗದ ವತಿಯಿಂದ (ಜನರಲ್ ಮೆಡಿಸಿನ್) ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ.) ಇದರ ಅಧ್ಯಕ್ಷ ಡಾ ಕೆ ವಿ ಚಿದಾನಂದ ವಹಿಸಿದ್ದರು. ಬಳಿಕ ಮೂರ್ಛೆ ರೋಗವು ರೋಗಿಗಳು ಮತ್ತು ಆರೈಕೆ ಮಾಡುವವರ ಮೇಲೆ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಬೀರುವ ಪರಿಣಾಮಗಳ ಕುರಿತು ಉಪಯುಕ್ತ ಮಾಹಿತಿ ನೀಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿಕಾಲೇಜಿನ ಡೀನ್ ಡಾ.ನೀಲಾಂಬಿಕೈ ನಟರಾಜನ್, ಮೆಡಿಕಲ್ ಸೂಪರಿಂಟೆಂಡೆಂಟ್ ಡಾ ಸಿ ಆರ್ ಭಟ್ , ಡಾ ಪ್ರಕಾಶ್ ರಾವ್, ಡಾ ಸರ್ಫರಾಜ್, ಕಮ್ಯುನಿಟಿ ಮೆಡಿಸಿನ್ ವಿಭಾಗ ಮುಖ್ಯಸ್ಥ ಡಾ ದಿನೇಶ್ ಪಿ ವಿ, ಮಕ್ಕಳ ವಿಭಾಗದ ಪ್ರಾಧ್ಯಾಪಕ ಡಾ ಸುಧಾ ರುದ್ರಪ್ಪ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಜ್ಞ ವೈದ್ಯರು ಅಪಸ್ಮಾರದ ಕುರಿತು ಉಪಯುಕ್ತ ಮಾಹಿತಿಯನ್ನು ನೀಡಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಅಪಸ್ಮಾರ ಕುರಿತಾದ ಕಿರು ಪ್ರಹಸನ ನಡೆಯಿತು.

See also  ಪುತ್ತೂರು: "ಆಶ್ರಯ ಮನೆ" ಆಸೆಗೆ ಇದ್ದ ಮನೆಯನ್ನೂ ಮುರಿದು ಬೀದಿಗೆ ಬಿದ್ದ ಕುಟುಂಬ, ಪಂಚಾಯತ್ ಎಡವಟ್ಟಿಗೆ ಹೆಂಡತಿ ಮನೆ ಸೇರಿಕೊಂಡ ಪತ್ನಿ, ಮಗ..!
  Ad Widget   Ad Widget   Ad Widget