ಕೆವಿಜಿ ಕ್ಯಾಂಪಸ್‌ಸುಳ್ಯ

ಕೆವಿಜಿ ಮಾತೃಸಂಸ್ಥೆ ಎನ್ನೆಂಸಿಯಲ್ಲಿ ಡಾ. ಕೆವಿಜಿಯವರ ಜನ್ಮದಿನದ ಸಂಸ್ಮರಣೆ, ಭಾವಚಿತ್ರಕ್ಕೆ ಪುಷ್ಪ ನಮನ

ನ್ಯೂಸ್ ನಾಟೌಟ್ :ಆಧುನಿಕ ಸುಳ್ಯದ ನಿರ್ಮಾತೃ ಶಿಕ್ಷಣ ಬ್ರಹ್ಮ ಕೆವಿಜಿ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾದ ದಿ. ಕುರುಂಜಿ ವೆಂಕಟರಮಣ ಗೌಡರ 96 ನೇ ವರ್ಷದ ಜನ್ಮ ದಿನಾಚರಣೆ ಮತ್ತು ಪುಷ್ಪ ನಮನ ಕಾರ್ಯಕ್ರಮ ಡಿಸೆಂಬರ್ 26 ರಂದು ಕೆವಿಜಿ ಮಾತೃಸಂಸ್ಥೆ ಎನ್ನೆಂಸಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ ದೀಪ ಬೆಳಗಿ ಡಾ. ಕೆವಿಜಿ ಸಾಧನೆ ಹಾಗೂ ಅವರ ತತ್ವ ಆದರ್ಶಗಳ ಬಗ್ಗೆ ವಿವರಿಸಿದರು.

ಎನ್ನೆಂಪಿಯುಸಿ ಪ್ರಾಂಶುಪಾಲರಾದ ಮಿಥಾಲಿ. ಪಿ.ರೈ, ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ರತ್ನಾವತಿ ಡಿ, ಐಕ್ಯೂಎಸಿ ಸಂಯೋಜಕರಾದ ಡಾ.ಮಮತಾ ಕೆ ಮತ್ತು ಎಲ್ಲಾ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಪುಷ್ಪ ನಮನ ಸಲ್ಲಿಸಿದರು. ಕನ್ನಡ ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related posts

ಸುಳ್ಯ:ಅಗಲಿದ ವೀರ ಯೋಧ ಕ್ಯಾ.ಪ್ರಾಂಜಲ್ ಎಂ.ವಿ.ರಿಗೆ ಗೌರವಾರ್ಪಣೆ,NMC ರೋವರ್ಸ್ ರೇಂಜರ್ಸ್ ವತಿಯಿಂದ ಕಾರ್ಯಕ್ರಮ

ಸುಳ್ಯ: ಬೈಕ್ – ರಿಕ್ಷಾ ನಡುವೆ ಅಪಘಾತ, ರಸ್ತೆಗೆ ಬಿದ್ದ ಬೈಕ್ ಸವಾರ

ಕಡಬ: ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು-ಕಾಮಗಾರಿ ಮುಗಿಯದೆ ಇರುವುದೇ  ವಾಹನ  ಅಪಘಾತಕ್ಕೆ ಕಾರಣ ಸಾರ್ವಜನಿಕರ ಆರೋಪ