ಕರಾವಳಿಸುಳ್ಯ

ದಿ.ಶ್ರೀಮತಿ ಜಾನಕಿ ವೆಂಕಟ್ರಮಣ ಗೌಡರ 11ನೇ ವರ್ಷದ ಪುಣ್ಯತಿಥಿ ಆಚರಣೆ,ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜ್‌ನಲ್ಲಿ ನಡೆದ ಕಾರ್ಯಕ್ರಮ

187

ನ್ಯೂಸ್ ನಾಟೌಟ್ : ಸುಳ್ಯದ ಅಕ್ಷರ ಬ್ರಹ್ಮ,ಕೆವಿಜಿ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷರಾದ ದಿ.ಡಾ.ಕುರುಂಜಿ ವೆಂಕಟರಮಣ ಗೌಡರ ಧರ್ಮ ಪತ್ನಿ ದಿ. ಶ್ರೀಮತಿ ಜಾನಕಿ ವೆಂಕಟ್ರಮಣ ಗೌಡರ 11ನೇ ವರ್ಷದ ಪುಣ್ಯತಿಥಿಯ ಪ್ರಯುಕ್ತ ನುಡಿನಮನ ಕಾರ್ಯಕ್ರಮ ಇಂದು ನಡೆಯಿತು.

ಸುಳ್ಯದ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್‌ ಮತ್ತು ಆಸ್ಪತ್ರೆಯಲ್ಲಿ ಈ ಕಾರ್ಯಕ್ರಮ ಏರ್ಪಟ್ಟಿದ್ದು, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ.ಯವರು ಶ್ರೀಮತಿ ದಿ. ಜಾನಕಿ ವೆಂಕಟ್ರಮಣ ಗೌಡರ ತತ್ವ ಆದರ್ಶಗಳನ್ನು ತಿಳಿಸಿ ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕೌನ್ಸಿಲ್ ಮೆಂಬರ್ ಶ್ರೀ ಜಗದೀಶ್ ಅಡ್ತಲೆ, ಶ್ರೀ ಚಂದ್ರಶೇಖರ್ ಪೇರಾಲ್, ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಶ್ರೀಮತಿ ದಿ. ಜಾನಕಿ ವೆಂಕಟ್ರಮಣ ಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

See also  ಪುತ್ತೂರು: ಹಾಲಿ ಶಾಸಕ ಸಂಜೀವ ಮಠಂದೂರು ಪರ ಒಕ್ಕಲಿಗ ಗೌಡ ಸಂಘದ ಬ್ಯಾಟಿಂಗ್
  Ad Widget   Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget