ನ್ಯೂಸ್ ನಾಟೌಟ್: ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆ. 07ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2ರ ವರೆಗೆ ಉಚಿತವಾಗಿ ಮೂಳೆ ಸಾಂದ್ರತಾ ಪರೀಕ್ಷೆ ಮತ್ತು ಸಮಾಲೋಚನೆ ಶಿಬಿರ ಏರ್ಪಡಿಸಲಾಗಿದೆ.
ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆಯ ವೈದ್ಯಕೀಯ ನಿರ್ದೇಶಕರು ಡಾ ಕೆ. ವಿ ಚಿದಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದೀರ್ಘಕಾಲದಿಂದ ಮಂಡಿ ಹಾಗೂ ಸೊಂಟದ ನೋವಿನಿಂದ ಬಳಲುತ್ತಿದ್ದಲ್ಲಿ, ಮೆಟ್ಟಿಲುಗಳನ್ನು ಹತ್ತುವಲ್ಲಿ ಕಷ್ಟವಾಗುತ್ತಿದ್ದಲ್ಲಿ, ವಯಸ್ಸಾದಂತೆ ಮೂಳೆ ಮೇಲಿನ ಒತ್ತಡ ಹೆಚ್ಚಾಗಿ ಮೂಳೆ ಸವೆತ ಉಂಟಾಗುತ್ತದೆ. ಇವುಗಳ ಕಾರ್ಯಕ್ಷಮತೆ ಕ್ಷೀಣಿಸುತ್ತದೆ. ಋುತುಚಕ್ರ ನಿಂತ ಮಹಿಳೆಯರಿಗೆ ಇಂತಹ ಎಲ್ಲ ಸಮಸ್ಯೆಗಳಿಗೆ ಮತ್ತು ಇದಕ್ಕೆಲ್ಲ ಈ ಪರೀಕ್ಷೆಯು ತುಂಬಾ ಉಪಯುಕ್ತ.
ನಾಳೆ ತಪ್ಪದೆ ಭೇಟಿ ನೀಡಿ ನಿಮ್ಮ ಮೂಳೆ ಖನಿಜಾಂಶಗಳ ಸಾಂದ್ರತೆ ಪರೀಕ್ಷೆ ಮಾಡಿಸಿ ಸಮಸ್ಯೆಗೆ ಪರಿಹಾರ ಪಡೆಯಿರಿ. ಸಂಪರ್ಕಿಸಿ. 7353752223