Latestಶಿಕ್ಷಣಸುಳ್ಯ

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿಶ್ವ ರಕ್ತ ದಾನಿಗಳ ದಿನಾಚರಣೆ, ರಕ್ತದಾನದ ಮಹತ್ವವನ್ನು ಸಾರುವ ವಿಶೇಷ ಕಿರು ಪ್ರಹಸನ ಪ್ರದರ್ಶನ

338

ನ್ಯೂಸ್ ನಾಟೌಟ್: ಇಂದು(ಜೂ.14) ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯದ ಅಧ್ಯಕ್ಷರಾದ ಡಾ ಕೆ. ವಿ ಚಿದಾನಂದ ವಹಿಸಿ ಮಾತನಾಡಿ, ರಕ್ತದಾನದ ಮಹತ್ವ ದ ಕುರಿತು ವಿಶೇಷ ಮಾಹಿತಿ ನೀಡಿದರು.

‘ಮನುಷ್ಯ ಆರೋಗ್ಯವಾಗಿರಲು ಶುದ್ದ ರಕ್ತದ ಅವಶ್ಯಕತೆ ತುಂಬಾ ಇರುತ್ತದೆ. ಜಗತ್ತಿನೆಲ್ಲಡೆ ಪ್ರತಿ ಕ್ಷಣ ಲೆಕ್ಕವಿಲ್ಲದಷ್ಟು ಜನರಿಗೆ ರಕ್ತದ ಅವಶ್ಯವಿರುತ್ತದೆ. ಅನೇಕರು ಸರಿಯಾದ ಸಮಯಕ್ಕೆ ರಕ್ತ ಸಿಗದೆ ಸಾವನ್ನಪ್ಪುವುದು ಉಂಟು, ಹಾಗಾಗಿ ದಾನಗಳಲ್ಲಿ ರಕ್ತದಾನವನ್ನು ಸಹ ಬಹಳ ಶ್ರೇಷ್ಠ ದಾನವೆಂದು ಕರೆಯಲಾಗುತ್ತದೆ. ಹಾಗಾಗಿ ಅಂತಹ ತುರ್ತು ಪರಿಸ್ಥಿತಿಯಲ್ಲಿ ಎದುರಾದಲ್ಲಿ ರಕ್ತ ದಾನ ಮಾಡಿ ಜೀವ ಉಳಿಸಿ’ ಎಂದರು.

ವಿದ್ಯಾರ್ಥಿಗಳಿಂದ ರಕ್ತದಾನದ ಮಹತ್ವವನ್ನು ಸಾರುವ ವಿಶೇಷ ಕಿರು ಪ್ರಹಸನ ನಡೆಸಲಾಯಿತು. ಬಳಿಕ ಪ್ರಹಸನ ಪ್ರಸ್ತುತ ಪಡಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ವೇದಿಕೆಯಲ್ಲಿ ಕಾಲೇಜಿನ ಡೀನ್ ಡಾ ನೀಲಾಂಬಿಕೈ ನಟರಾಜನ್, ಪೆತಾಲಜಿ ವಿಭಾಗ ಮುಖ್ಯಸ್ಥರಾದ ಪ್ರೊ.ಡಾ ಸತ್ಯವತಿ ಆರ್ ಆಳ್ವ, ಪ್ರೊಫೆಸರ್ ಡಾ ನವ್ಯ, ಬಯೋಕೆಮಿಸ್ಟ್ರಿ ವಿಭಾಗ ಮುಖ್ಯಸ್ಥರು ಪ್ರೊ. ಡಾ ಶಿವರಾಜ್ ಶಂಕರ್, ಎಮರ್ಜೆನ್ಸಿ ವಿಭಾಗದ ಡಾ ಹೆರಾಲ್ಡ್ ಲೂಯಿಸ್, ಕಮ್ಯುನಿಟಿ ವಿಭಾಗದ ಮುಖ್ಯಸ್ಥರು ಪ್ರೊ. ಡಾ ದಿನೇಶ್ ಪಿ.ವಿ, ಅಸೋಸಿಯೇಟ್ ಪ್ರೊಫೆಸರ್ ಡಾ ಅಪೂರ್ವ ದೊರೆ, ಶ್ವಾಸಕೋಶ ತಜ್ಞರಾದ ಡಾ ಪ್ರೀತಿರಾಜ್ ಬಲ್ಲಾಳ್, ಕೆವಿಜಿ ಕಾಲೇಜ್ ಆಫ್ ನರ್ಸಿಂಗ್ ಸೈನ್ಸಸ್ ನ ಪ್ರಾಂಶುಪಾಲರು ಬಿ ಎಮ್ ಪ್ರೇಮ, ಕೆವಿಜಿ ಕಾಲೇಜ್ ಆಫ್ ನರ್ಸಿಂಗ್ ಪ್ರಾಂಶುಪಾಲರು ಚಂದ್ರಾವತಿ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು. ಜೊತೆಗೆ ಎಲ್ಲಾ ವಿಭಾಗ ಮುಖ್ಯಸ್ಥರು, ವಿದ್ಯಾರ್ಥಿಗಳು ಭೋದಕ-ಭೋದಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಸೋಣoಗೇರಿ: ವಿಶ್ವ ಯೋಗ ದಿನದ ಅಂಗವಾಗಿ ಹರಿತ್ ಯೋಗ – ಯೋಗ ಹಾಗು ಪರಿಸರದ ಸಂಯೋಗ ಕಾರ್ಯಕ್ರಮ, 50ಕ್ಕೂ ಅಧಿಕ ಔಷಧೀಯ ಸಸ್ಯಗಳನ್ನು ನೆಟ್ಟ ವಿದ್ಯಾರ್ಥಿಗಳು

See also  ಮೂರ್ಛೆ ಹೋದ ಉಪರಾಷ್ಟ್ರಪತಿ..! ವಿವಿ ಸುವರ್ಣ ಮಹೋತ್ಸವದ ವೇಳೆ ಘಟನೆ..!
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget