ಸುಳ್ಯ

ಸುಳ್ಯ: ಅಮರ ಸಂಘಟನಾ ಸಮಿತಿ, ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಿಂದ ಕುಕ್ಕುಜಡ್ಕ ಶಾಲೆಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

43
Spread the love

ನ್ಯೂಸ್ ನಾಟೌಟ್: ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ಹಿಂದಿನ ಕಾಲದ ಚಿಕಿತ್ಸೆಗೂ ಈಗಿನ ಕಾಲದ ಚಿಕಿತ್ಸೆಗೆ ಭಾರಿ ವ್ಯತ್ಯಾಸವಿದೆ. ಈಗ ಹೊಸ ಹೊಸ ತಂತ್ರಜ್ಞಾನದ ಮೂಲಕ ಯಾವುದೇ ರೋಗವನ್ನೂ ಸುಲಭವಾಗಿ ಪತ್ತೆಹಚ್ಚಬಹುದು. ಸುಳ್ಯದಂತ ಗ್ರಾಮೀಣ ಭಾಗದಲ್ಲಿ ಆಸ್ಪತ್ರೆ, ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಕುರುಂಜಿ ವೆಂಕಟ್ರಮಣ ಗೌಡರ ಕೊಡುಗೆ ಅಪಾರ ಎಂದು ಅಕಾಡೆಮಿಕ್‌ ಆಫ್‌ ಲಿಬರಲ್‌ ಎಜುಕೇಶನ್‌ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಹೇಳಿದರು.

ಸುಳ್ಯ ಅಮರ ಸಂಘಟನಾ ಸಮಿತಿ ಆಶ್ರಯದಲ್ಲಿ ಸುಳ್ಯ ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದೊಂದಿಗೆ ಕುಕ್ಕುಜಡ್ಕ ದ. ಕ. ಜಿ. ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಆರೋಗ್ಯ ಕ್ಷೇತ್ರಕ್ಕೆ ಸುಳ್ಯದ ಕೆ.ವಿ.ಜಿ ಸಂಸ್ಥೆಯ ಕೊಡುಗೆ ಮತ್ತು ತಂತ್ರಜ್ಞಾನದ ಹಾಗೂ ಹಿಂದಿನ ನೆನಪುಗಳನ್ನು ಡಾ. ಕೆ.ವಿ. ಚಿದಾನಂದ ಮೆಲುಕು ಹಾಕಿ, ಇಂದಿನ ಉಚಿತ ಆರೋಗ್ಯ ತಪಾಸಣೆ ಶಿಬಿರದ ಪ್ರಯೋಜನವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಸುಳ್ಯ ಅಮರ ಸಂಘಟನಾ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಮರಮುಡ್ನೂರು ಅಧ್ಯಕ್ಷ ಜಾನಕಿ ಕಂದಡ್ಕ, ಸುಳ್ಯ ಕಾರ್ಮಿಕ ರಾಜ್ಯ ನಿಗಮದ ವೈದ್ಯ ಡಾ.ಎಂ.ಬಿ. ಪಾರೆ, ದೊಡ್ಡತೋಟ ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಕೃಷ್ಣಪ್ಪ ಎಂ., ಅಮರಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ಚೂಂತಾರು, ಚೊಕ್ಕಾಡಿ ಪ್ರಾ. ಕೃ. ಪ.ಸಂಘ ನಿ. ಕುಕ್ಕುಜಡ್ಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ್ ಕುಮಾರ್ ಪೊಯ್ಯೆಮಜಲು, ಪ್ರಗತಿಪರ ಕೃಷಿಕ ಸುಪ್ರೀತ್ ಮೊಂಟಡ್ಕ, ಕೆ.ವಿ. ಜಿ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ. ಗೀತಾ ದೊಪ್ಪ, ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಚಂದ್ರಶೇಖರ ಪೇರಾಲು , ಡಾ .ನಿತಿನ್, ವೈದ್ಯಕೀಯ ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

See also  ಗ್ರಾಮ ಆಡಳಿತಾಧಿಕಾರಿಯಾಗುವ ಕನಸು ನಿಮಗಿದೆಯೇ..? ನಿಮ್ಮ ಜೊತೆಗಿದೆ IRCMD ಶಿಕ್ಷಣ ಸಂಸ್ಥೆ
  Ad Widget   Ad Widget   Ad Widget