ಶಿಕ್ಷಣಸುಳ್ಯ

ಸುಳ್ಯ: ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ‘ಕ್ಲೋಸ್‌ ದಿ ಕೇರ್‌ ಗ್ಯಾಪ್‌’ ಕಾರ್ಯಾಗಾರ

ನ್ಯೂಸ್‌ ನಾಟೌಟ್: ವಿಶ್ವ ಕ್ಯಾನ್ಸರ್‌ ದಿನದ ಅಂಗವಾಗಿ ಸುಳ್ಯ ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶುಕ್ರವಾರ (ಡಿ.22) ‘ಕ್ಲೋಸ್‌ ದಿ ಕೇರ್‌ ಗ್ಯಾಪ್‌’ ಕಾರ್ಯಾಗಾರ ಆಯೋಜಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರಿನ ಯೇನೆಪೊಯ ವಿಶ್ವವಿದ್ಯಾಲಯದ ವೈಸ್‌ ಚಾನ್ಸಿಲರ್ ಡಾ. ಎಂ. ವಿನಯಕುಮಾರ್ ಮಾತನಾಡಿ, ಕ್ಯಾನ್ಸರ್‌ ರೋಗದ ಬಗ್ಗೆ ಜಾಗೃತಿ ಅಗತ್ಯ. ಕ್ಯಾನ್ಸರ್‌ ರೋಗಕ್ಕೆ ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆ ವಹಿಸಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.

ಅಕಾಡೆಮಿ ಆಫ್‌ ಲಿಬರಲ್‌ ಎಜುಕೇಶನ್‌ ಸುಳ್ಯ ಇದರ ಅಧ್ಯಕ್ಷ ಕೆ.ವಿ. ಚಿದಾನಂದ ಮಾತನಾಡಿ, ಸುಳ್ಯದಂತ ಗ್ರಾಮೀಣ ಪ್ರದೇಶದಲ್ಲಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ನಿರ್ಮಾಣವಾಗಿ ಇಲ್ಲಿನ ಜನತೆಗೆ ಹೆಚ್ಚಿನ ಪ್ರಯೋಜನವಾಗಿದೆ. ಆಂಕಾಲಜಿ ವಿಭಾಗದ ಸೇವೆ ಆರಂಭವಾದ ಬಳಿಕ ಹಲವಾರು ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಯೇನೆಪೊಯ ವಿಶ್ವವಿದ್ಯಾಲಯದ ಯುರಾಲಜಿ ವಿಭಾಗದ ಅಸೋಸಿಯೇಟ್‌ ಪ್ರೊಫೆಸರ್‌ ಡಾ. ನಿಶ್ಚಿತ್ ಡಿಸೋಜ, ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಗೋಪಿನಾಥ್ ಪೈ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಎಚ್‌ಒಡಿ ಡಾ. ಗೀತಾ ದೊಪ್ಪ, ಜನರಲ್‌ ಸರ್ಜರಿ ವಿಭಾಗದ ಎಚ್‌ಒಡಿ ಡಾ. ಎಂ.ಎ. ಬಾಲಕೃಷ್ಣ, ಜನರಲ್‌ ಸರ್ಜರಿ ವಿಭಾಗದ ಪ್ರೊಫೆಸರ್‌ ಡಾ. ಜಗದೀಶ್‌ ಮತ್ತು ವೈದ್ಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Related posts

ನೆಹರೂ ಮೆಮೋರಿಯಲ್ ಕಾಲೇಜಿನ ವಿಜ್ಞಾನ ಸಂಘದ ವತಿಯಿಂದ ವಿಜ್ಞಾನ ಮಾದರಿ ರಚನೆ ಸ್ಪರ್ಧೆ, ಇಲ್ಲಿದೆ ವಿಡಿಯೋ

ಸುಳ್ಯ ಪರಿಸರದ ಕಥೆಗೆ ಬಣ್ಣ ಹಚ್ಚಿದ ನವೀನ್ ಡಿ ಪಡೀಲ್! ಮೊದಲ ಅರೆಭಾ‍ಷಾ ಚಿತ್ರ ಬಿಡುಗಡೆಗೆ ಕ್ಷಣಗಣನೆ

ಸುಳ್ಯ ಕ್ಷೇತ್ರದ ಅಭಿವೃದ್ಧಿಗೆ ಕಡಿಮೆ ಅನುದಾನ ಯಾಕೆ?ಬಿಜೆಪಿಗೆ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಪ್ರಶ್ನೆಗಳ ಸುರಿಮಳೆ