ವೈರಲ್ ನ್ಯೂಸ್ಸುಳ್ಯ

ಕೆವಿಜಿ ಕಾನೂನು ಮಹಾವಿದ್ಯಾಲಯದಲ್ಲಿ ಕಲಿಯುವ ಆಸೆ ಯುವಕರಿಗಿದೆಯೇ..? ಇಲ್ಲಿದೆ ಸುವರ್ಣಾವಕಾಶ

238

ನ್ಯೂಸ್ ನಾಟೌಟ್: ನೀವು ಕಾನೂನು ಪದವಿ ಪಡೆಯುವ ಕನಸು ಕಾಣುತ್ತಿದ್ದೀರಾ..? ಹಾಗಾದರೆ ತಡೆ ಯಾಕೆ ಮಾಡುತ್ತಿದ್ದೀರಿ..? ನಿಮ್ಮ ಊರಿನ ಸನಿಹದಲ್ಲಿಯೇ ಇರುವ ಸುಳ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯನ್ನು ಇಂದೇ ಸೇರಿಕೊಂಡು ನಿಮ್ಮ ಬಹು ದಿನದ ಕನಸನ್ನು ನನಸಾಗಿಸಿಕೊಳ್ಳಿ. ಹೌದು, ಸುಳ್ಯದ ಅಮರಶಿಲ್ಪಿ ದಿವಂಗತ ಕುರುಂಜಿ ವೆಂಕಟರಮಣ ಗೌಡರು ಕಟ್ಟಿ ಬೆಳೆಸಿದ ಡಾ| ಚಿದಾನಂದ ಕೆ.ವಿ ಅವರ ನೇತೃತ್ವದ ಕೆವಿಜಿ ಕಾನೂನು ಮಹಾವಿದ್ಯಾಲಯದಲ್ಲಿ ಕಲಿಯುವ ಆಸೆ ಹೊಂದಿರುವ ಯುವಕರಿಗೆ ಎರಡು ರೀತಿಯ ಆಕರ್ಷಕ ಕೋರ್ಸ್ ಗಳು ನಿಮ್ಮ ಕೆವಿಜಿ ಕ್ಯಾಂಪಸ್ ನಲ್ಲಿ ಲಭ್ಯವಿದೆ.

ಪಿಯುಸಿ ಅಥವಾ ತತ್ಸಮಾನ ಕೋರ್ಸ್ ಹೊಂದಿರುವರಿಗೆ ಐದು ವರ್ಷದ ಕೋರ್ಸ್ (ಬಿಎ, ಎಲ್ ಎಲ್ ಬಿ). ಪದವಿ ಹೊಂದಿರುವವರಿಗೆ ಮೂರು ವರ್ಷದ ಎಲ್ ಎಲ್ ಬಿ ಕೋರ್ಸ್ ಪಡೆಯುವ ಅವಕಾಶವಿದೆ. ಸುಳ್ಯದ ಸುಂದರ ಪರಿಸರದಲ್ಲಿ ನಿರ್ಮಿಸಲಾದ ನೂತನ ಕಟ್ಟಡದಲ್ಲಿ ಎಲ್ಲಾ ಆಧುನಿಕ ಸೌಕರ್ಯಗಳನ್ನು ನೀಡಲಾಗಿದೆ. ನುರಿತ ಶಿಕ್ಷಕರು, ಸುಸಜ್ಜಿತ ಗ್ರಂಥಾಲಯ, ಗಣಕೀಕೃತ ಗ್ರಂಥಾಲಯ, ಅಣಕು ನ್ಯಾಯಾಲಯ ಮತ್ತು ಭವ್ಯ ಸಭಾಂಗಣ ಇದೆ.

ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವಿರುತ್ತದೆ. ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆಯಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7353756813 ಅಥವಾ 08257-230603 ಸಂಖ್ಯೆಗೆ ಕರೆ ಮಾಡಿ. kvglawcollegesulliadk@yahoo.in ಇ ಮೇಲ್ ಮೂಲಕವೂ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

See also  ಗೀಸರ್ ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ವಿಡಿಯೋ ತೋರಿಸಿ ಮಹಿಳೆಗೆ ಬೆದರಿಕೆ..! ಇಲ್ಲಿದೆ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget