ಶಿಕ್ಷಣಸುಳ್ಯ

ಕೆ.ವಿ.ಜಿ. ‘ಸುಳ್ಯ ಹಬ್ಬ’ ಕಚೇರಿಯಲ್ಲಿ ಕೆ.ವಿ.ಜಿಯವರ 11ನೇ ಪುಣ್ಯಸ್ಮರಣೆ, ಗಣ್ಯರಿಂದ ನುಡಿನಮನ

ನ್ಯೂಸ್ ನಾಟೌಟ್: ನ್ಯೂಸ್ ನಾಟೌಟ್: ಡಾ.ಕುರುಂಜಿ ವೆಂಕಟರಮಣಗೌಡರ 11ನೇ ಪುಣ್ಯಸ್ಮರಣೆಯ ಪ್ರಯುಕ್ತ ಆಗಸ್ಟ್ 7 ರಂದು ಕೆ.ವಿ.ಜಿ. ಸುಳ್ಯ ಹಬ್ಬ ಕಚೇರಿಯಲ್ಲಿ ವಿಶೇಷ ನುಡಿನಮನ ಸಲ್ಲಿಸಲಾಯಿತು.

ಈ ಸಂದರ್ಭ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯದ ಅಧ್ಯಕ್ಷರಾದ ಡಾ.ಕೆ.ವಿ. ಚಿದಾನಂದ, ಕಾರ್ಯದರ್ಶಿ ಗಳಾದ ಕೆ. ವಿ ಹೇಮನಾಥ್, ಕೌಂನ್ಸಿಲ್ ಮೆಂಬರ್ ಜಗದೀಶ್ ಅಡ್ತಲೆ. ಆಡಳಿತ ಸಲಹೆಗಾರರಾದ ಪ್ರೊ.ದಾಮೋದರ ಗೌಡ, ಸುಳ್ಯ ಹಬ್ಬದ ಸ್ಥಾಪಕಾಧ್ಯಕ್ಷ ಜಯಪ್ರಕಾಶ್ ರೈ, ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಡಾ. ಎನ್. ಎ ಜ್ಞಾನೇಶ್, ನಿಕಟ ಪೂರ್ವ ಅಧ್ಯಕ್ಷ ಚಂದ್ರಶೇಖರ್ ಪೇರಾಲು, ಡಾ.ಲೀಲಾಧರ್ ಡಿ.ವಿ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದು ದಿವಂಗತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು .

ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ, ಡಾ.ಎನ್. ಎ. ಜ್ಞಾನೇಶ್ ಆಗಮಿಸಿದ ಅತಿಥಿ ಗಣ್ಯರನ್ನು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ರಾಜು ಪಂಡಿತ್ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಕೆವಿಜಿ ಯವರ ಅಭಿಮಾನಿಗಳು, ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಸುಳ್ಯ:ವಿಷ ಸೇವಿಸಿ ಕಾಂಗ್ರೆಸ್ ನಾಯಕ ಆತ್ಮಹತ್ಯೆ

ಇಂದು ಸುಳ್ಯ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ, ದೀಪ ಬೆಳಗಿಸಿ ಉದ್ಘಾಟಿಸಲಿರುವ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ| ಕೆ.ವಿ ಚಿದಾನಂದ

ಮಕ್ಕಳಲ್ಲಿ ಎಳವೆಯಲ್ಲೇ ಮೂಡಲಿ ಪರಿಸರ ಜಾಗೃತಿ: ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ. ರಮೇಶ್