Uncategorized

ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಪೂಜ್ಯ ಕೆ.ವಿ.ಜಿಯವರ ಪುಣ್ಯಸ್ಮರಣೆ, ಗಣ್ಯರಿಂದ ಪುಷ್ಪಾರ್ಚನೆ

ನ್ಯೂಸ್ ನಾಟೌಟ್: ನ್ಯೂಸ್ ನಾಟೌಟ್ : ಆಧುನಿಕ ಸುಳ್ಯದ ನಿರ್ಮಾತೃ, ಶಿಕ್ಷಣ ಬ್ರಹ್ಮ, ಕೆವಿಜಿ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷರಾದ ದಿ. ಡಾ. ಕುರುಂಜಿ ವೆಂಕಟ್ರಮಣ ಗೌಡರ 11ನೇ ವರ್ಷದ ಪುಣ್ಯತಿಥಿಯ ಪ್ರಯುಕ್ತ ಪುಷ್ಪನಮನ ಕಾರ್ಯಕ್ರಮವು ಸುಳ್ಯದ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್‌ನಲ್ಲಿ ಆಗಸ್ಟ್ 07ರಂದು ನಡೆಯಿತು.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯದ ಕೌನ್ಸಿಲ್ ಮೆಂಬರ್ ಶ್ರೀ ಜಗದೀಶ್ ಅಡ್ತಲೆ ಕೆವಿಜಿಯವರಿಗೆ ನುಡಿನಮನ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಎಡ್ವೈಸರ್ ಆಗಿರುವ ಪ್ರೊ. ದಾಮೋದರ ಗೌಡರು ಕೆವಿಜಿಯವರ ಭಾವಚಿತ್ರಕ್ಕೆ ದೀಪಬೆಳಗಿಸಿ ಪುಷ್ಪನಮನ ಸಲ್ಲಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಲೀಲಾಧರ್ ಡಿ. ವಿ. ಡಾ. ಕುರುಂಜಿ ವೆಂಕಟ್ರಮಣ ಗೌಡರ ತತ್ವ ಆದರ್ಶಗಳನ್ನು ತಿಳಿಸಿದರು, ಜೊತೆಗೆ ಗಣ್ಯರನ್ನು ಸ್ವಾಗತಿಸಿ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ದಕ್ಷಿಣ ಒಳನಾಡಿನ 9 ಜಿಲ್ಲೆಗಳಲ್ಲಿ ಡಿ. 26 ರಿಂದ 3 ದಿನ ಮಳೆ!!!

ಫೆ.12ರಿಂದ ಪ್ರಧಾನಿ ಮೋದಿ ಎರಡು ದಿನಗಳ ಅಮೆರಿಕ ಪ್ರವಾಸ, ನೂತನ ಅಧ್ಯಕ್ಷ ಟ್ರಂಪ್ ಜೊತೆ ಮಾತುಕತೆ

ಚಾರ್ಮಾಡಿ: ದಿನದ 24 ಗಂಟೆ ಲಘು ವಾಹನ ಸಂಚಾರ, ಸದ್ಯಕ್ಕಿಲ್ಲ ಘನ ವಾಹನಕ್ಕೆ ಅನುಮತಿ