ಕರಾವಳಿಸುಳ್ಯ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ವಿಭಾಗದ 6 ವಿದ್ಯಾರ್ಥಿಗಳಿಗೆ ರ‍್ಯಾಂಕ್‌ , ಅಂತಿಮ ವರ್ಷದ ಎಂ.ಡಿ. /ಎಂ.ಎಸ್ ನಲ್ಲಿ ವಿದ್ಯಾರ್ಥಿಗಳ ಭರ್ಜರಿ ಸಾಧನೆ

ನ್ಯೂಸ್ ನಾಟೌಟ್: ಸುಳ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕೆವಿಜಿ ಆಯುರ್ವೇದ ವೈದ್ಯಕೀಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಪ್ರಸಕ್ತ ವರ್ಷ ನಡೆಸಿದ ಅಂತಿಮ ವರ್ಷದ ಪರೀಕ್ಷೆಯಲ್ಲಿ ಭರ್ಜರಿ ಸಾಧನೆ ಮಾಡಿದ್ದಾರೆ.

ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಕರ್ನಾಟಕ, ಬೆಂಗಳೂರು ಆಯೋಜಿಸಿದ ಪರೀಕ್ಷೆಯಲ್ಲಿ6 ವಿದ್ಯಾರ್ಥಿಗಳು ರ‍್ಯಾಂಕ್‌ ಪಡೆದು ಮಿಂಚಿದ್ದಾರೆ. ಎಂ.ಡಿ. /ಎಂ.ಎಸ್ (ಆಯುರ್ವೇದ) ಪರೀಕ್ಷೆಯಲ್ಲಿ ರ‍್ಯಾಂಕ್‌ ಲಭಿಸಿರುವುದು ವಿಶೇಷವಾಗಿದೆ. ಪಂಚಕರ್ಮ ವಿಭಾಗ ಮುಖ್ಯಸ್ಥ ಡಾ| ಸನತ್ ಕುಮಾರ್ ಡಿ. ಜಿ. ಮಾರ್ಗದರ್ಶನದಲ್ಲಿ ಡಾ| ಗುರುಕಿರತ್ ಕೌರ್ ಪಂಚಕರ್ಮ ವಿಭಾಗದಲ್ಲಿ 4ನೇ ರ್‍ಯಾಂಕ್ ಹಾಗೂ ಡಾ| ಪ್ರತಿಮಾ ಎನ್ 8ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ. ಅಗದತಂತ್ರ ವಿಭಾಗ ಮುಖ್ಯಸ್ಥ ಹಾಗೂ ಪ್ರಾಂಶುಪಾಲ ಡಾ| ಲೀಲಾಧರ್ ಡಿ. ವಿ ಮಾರ್ಗದರ್ಶನದಲ್ಲಿ ಡಾ| ಶ್ರೇಯಾ ಎಸ್. ಶೆಟ್ಟಿ ಹಾಗೂ ಡಾ| ಸುರಭಿ ಪಿ. 8ನೇ ರ್‍ಯಾಂಕ್ ಪಡೆದಿದ್ದಾರೆ. ರಸಶಾಸ್ತ್ರ ಮತ್ತು ಭೈಷಜ್ಯ ಕಲ್ಪನಾ ವಿಭಾಗ ಮುಖ್ಯಸ್ಥ ಡಾ| ಪುರುಷೋತ್ತಮ ಕೆ. ಜಿ. ಮಾರ್ಗದರ್ಶನದಲ್ಲಿ ಡಾ| ಅಂಬಿಲಿ ಕೆ. ಎಸ್. 8ನೇ ರ್‍ಯಾಂಕ್ ಪಡೆದಿದ್ದಾರೆ. ಕಾಯಚಿಕಿತ್ಸಾ ವಿಭಾಗ ಮುಖ್ಯಸ್ಥ ಡಾ| ಭಾಗ್ಯೇಶ್ ಕೆ. ಮಾರ್ಗದರ್ಶನದಲ್ಲಿ ಡಾ. ವಿನಿತಾ ನಾಯರ್ 7ನೇ ರ್‍ಯಾಂಕ್ ಪಡೆದಿದ್ದಾರೆ.

ವಿಭಾಗದ ಮುಖ್ಯಸ್ಥರುಗಳನ್ನು, ವಿಭಾಗದ ಪ್ರಾಧ್ಯಾಪಕರುಗಳನ್ನು ಹಾಗೂ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಅಧ್ಯಕ್ಷ ಡಾ| ಕೆ. ವಿ. ಚಿದಾನಂದ, ಪ್ರಧಾನ ಕಾರ್ಯದರ್ಶಿ ಅರ್ಕಿಟೆಕ್ಟ್ ಅಕ್ಷಯ್ ಕೆ.ಸಿ., ಉಪಾಧ್ಯಕ್ಷೆ ಶೋಭಾ ಚಿದಾನಂದ, ಕಾರ್ಯದರ್ಶಿ ಡಾ. ಐಶ್ವರ್ಯ ಕೆ. ಸಿ,ಕೆ. ವಿ. ಹೇಮನಾಥ, ಖಜಾಂಜಿ ಡಾ. ಗೌತಮ್ ಗೌಡ ಹಾಗೂ ಕೌಂನ್ಸಿಲ್ ಮೆಂಬರ್ಸ್ ಮತ್ತು ಕಾಲೇಜಿನ ಪ್ರಾಂಶುಪಾಲ ಪ್ರೋ. ಡಾ. ಲೀಲಾಧರ್ ಡಿ. ವಿ ಅಭಿನಂದಿಸಿದ್ದಾರೆ.

Related posts

‘ಕೂ’ ನಲ್ಲಿ ಮೊಳಗಿದ ಕನ್ನಡ ರಾಜ್ಯೋತ್ಸವ ಕಂಪು..!

ನಟಿ ಜ್ಯೋತಿ ರೈ ಎನ್ನಲಾದ ಅಶ್ಲೀಲ ಖಾಸಗಿ ವಿಡಿಯೊಗಳು ವೈರಲ್..? ದೂರು ಕೊಟ್ಟ ನಟಿ, ಪ್ರಜ್ವಲ್ ರೇವಣ್ಣ ಕೇಸ್ ಬೆನ್ನಲ್ಲೇ ಸಾಲು-ಸಾಲು ಪ್ರಕರಣಗಳು ಬಯಲಿಗೆ..!

ಶ್ರೀ ಶಾರದಾಂಬಾ ಉತ್ಸವ ಶೋಭಾಯಾತ್ರೆ: ಗಮನ ಸೆಳೆದ ಕೆದಂಬಾಡಿ ರಾಮಯ್ಯ ಗೌಡರ ಸ್ತಬ್ಧಚಿತ್ರ, ಜನಮನ ಗೆದ್ದ ಭಜನಾ ಕುಣಿತ, ಆಕರ್ಷಕ ಮೆರವಣಿಗೆ