ಕೆವಿಜಿ ಕ್ಯಾಂಪಸ್‌ಸುಳ್ಯ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ದಿ. ಡಾ.ಕೆ.ವಿ.ಜಿ ಯವರ 96ನೇ ವರ್ಷದ ಜನ್ಮ ದಿನಾಚರಣೆ, ಪುಷ್ಪ ನಮನ ಸಲ್ಲಿಸಿ ಗೌರವಾರ್ಪಣೆ

157

ನ್ಯೂಸ್ ನಾಟೌಟ್ :ಆಧುನಿಕ ಸುಳ್ಯದ ನಿರ್ಮಾತೃ, ಶಿಕ್ಷಣ ಬ್ರಹ್ಮ, ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾದ ದಿವಂಗತ ಡಾ. ಕುರುಂಜಿ ವೆಂಕಟರಮಣ ಗೌಡರ 96ನೇ ವರ್ಷದ ಜನ್ಮ ದಿನಾಚರಣೆಯ ಪ್ರಯುಕ್ತ ಪುಷ್ಪ ನಮನ ಕಾರ್ಯಕ್ರಮವು ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಡಿಸೆಂಬರ್ 26ರಂದು ನಡೆಯಿತು.

ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಲೀಲಾದರ್ ಡಿ. ವಿ. ಕುರುಂಜಿ ವೆಂಕಟರಮಣ ಗೌಡರ ತತ್ವ ಆದರ್ಶಗಳನ್ನು ತಿಳಿಸಿ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಕಾಡೆಮಿಯಲ್ ಆಫ್ ಲಿಬರಲ್ ಎಜುಕೇಶನ್ ರಿಜಿಸ್ಟರ್ ಸುಳ್ಯ ಇದರ ಕೌನ್ಸಿಲ್ ಮೆಂಬರ್ ಜಗದೀಶ್ ಅಡ್ತಲೆ, ಸಂಸ್ಥೆಯ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಹರ್ಷಿತಾ ಎಂ, ಸಂಸ್ಥೆಯ ಬೋಧಕ -ಬೋಧಕೇತರ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಪುಷ್ಪ ನಮನ ಸಲ್ಲಿಸಿದರು.

See also  ಗ್ಯಾರಂಟಿ ಯೋಜನೆ ಜನರಿಗೆ ತಲುಪಿಲ್ಲ ಎಂದಾದರೆ ಮನೆಯ ಗ್ರಹಲಕ್ಷ್ಮಿಯರಲ್ಲಿ ಕೇಳಲಿ! ಸುಳ್ಯ ಬಿಜೆಪಿ ನಾಯಕರ ಟೀಕೆಗಳನ್ನು ಖಂಡಿಸಿದ ಕಾಂಗ್ರೆಸ್ ಮುಖಂಡ ಎಂ ವೆಂಕಪ್ಪ ಗೌಡ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget