ಕರಾವಳಿಕ್ರೈಂ

ಭೀಕರ ಅಪಘಾತ, ಕೆವಿಜಿ ನರ್ಸಿಂಗ್ ಕಾಲೇಜಿನ ಹಳೆ ವಿದ್ಯಾರ್ಥಿ ದಾರುಣ ಸಾವು

111

ನ್ಯೂಸ್ ನಾಟೌಟ್: ಕೆವಿಜಿ ನರ್ಸಿಂಗ್ ಕಾಲೇಜಿನ ಹಳೆ ವಿದ್ಯಾರ್ಥಿಯೊಬ್ಬರು ಶನಿವಾರ ಅಪಘಾತದಲ್ಲಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಮೃತರನ್ನು ಅಭಿಜಿತ್ ಎಂದು ಗುರುತಿಸಲಾಗಿದೆ. ಇವರು ಕಳೆದ ಮೂರು ತಿಂಗಳ ಹಿಂದೆ ಸುಳ್ಯದಿಂದ ಕಾಲೇಜು ಶಿಕ್ಷಣವನ್ನು ತೊರೆದು ತಮ್ಮ ಊರು ಕೇರಳಕ್ಕೆ ವಾಪಸ್ ಹೋಗಿದ್ದರು. ಕೇರಳದಿಂದ ಬೆಂಗಳೂರಿಗೆ ತೆರಳಿ ಅಲ್ಲಿ ಕೋರ್ಸ್ ವೊಂದಕ್ಕೆ ಸೇರಿಕೊಂಡಿದ್ದರು. ಹಾಗೆ ಹೋದವರು ಅಲ್ಲಿ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ವಾರಗಳ ಹಿಂದೆ ನಡೆದಿದ್ದ ಅಪಘಾತದಲ್ಲಿ ಗಂಭೀರಗೊಂಡಿದ್ದ ಅಭಿಜಿತ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಸಾವಿಗೀಡಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

See also  ಕೊಡಗಿನ ವ್ಯಕ್ತಿಯಿಂದ ಸಕಲೇಶಪುರದಲ್ಲಿ ವಿಷ ಸೇವನೆ, ಗಂಭೀರ ಸ್ಥಿತಿಯಲ್ಲಿರುವ ವ್ಯಕ್ತಿಯ ಮನೆಯವರಿಗಾಗಿ ಮನವಿ
  Ad Widget   Ad Widget   Ad Widget   Ad Widget   Ad Widget   Ad Widget