ನ್ಯೂಸ್ ನಾಟೌಟ್: ಸುಳ್ಯ ತಾಲೂಕಿನ ಆಲೆಟ್ಟಿ ಕೂರ್ನಡ್ಕದಲ್ಲಿ ಅಡಿಕೆ ಮರದ ಕಾಲು ಸಂಕ ದಾಟುತ್ತಿದ್ದ ಸಂದರ್ಭದಲ್ಲಿ ನೀರಿಗೆ ಬಿದ್ದು ನಾಪತ್ತೆಯಾಗಿರುವ ವ್ಯಕ್ತಿಗಾಗಿ ಕಳೆದ ಮೂರು ದಿನಗಳಿಂದ ವ್ಯಾಪಕ ಹುಡುಕಾಟ ನಡೆಯುತ್ತಿದೆ. ಹೀಗಿದ್ದರೂ ಆತನ ಸುಳಿವು ಸಿಕ್ಕಿಲ್ಲ.
ಇದೀಗ ಮೂರನೇ ದಿನವೂ ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ.
ಅಗ್ನಿಶಾಮಕ ದಳ, ಎಸ್‌ಡಿಆಎರ್ ಎಫ್ ತಂಡ, ಅಗ್ನಿಶಾಮಕ ದಳ ಸುಳ್ಯ, ಸುಳ್ಯ ಪೊಲೀಸ್ ಠಾಣಾ ಸಿಬ್ಬಂದಿ, SKSSF ಅರಂತೋಡು ಕಲ್ಲುಗುಂಡಿ ವಿಖಾಯ ತಂಡ, ಕಂದಾಯ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯತ್ ಸಿಬ್ಬಂದಿ, ಸುಳ್ಯ-ಪೆರಾಜೆಯ ಮುಳುಗು ತಜ್ಞರಿಂದ ಕಾರ್ಯಾಚರಣೆ ನಡೆಯುತ್ತಿದೆ.