ಕರಾವಳಿಕ್ರೈಂಪುತ್ತೂರುಸುಳ್ಯ

ಕುಂದಾಪುರದಲ್ಲಿ ನೀರುಪಾಲಾದ ಸುಳ್ಯದ ಐವರ್ನಾಡಿನ ಯುವಕನ ಶವ ಪತ್ತೆ

312

ನ್ಯೂಸ್‌ ನಾಟೌಟ್‌: ಕುಂದಾಪುರ ತಾಲೂಕಿನ ಬುದ್ಕಲ್‌ಕಟ್ಟೆ ಸಮೀಪದ ಸೌಡ ಎಂಬಲ್ಲಿ ಶುಕ್ರವಾರ ಸ್ನಾನಕ್ಕೆಂದು ನದಿಗೆ ಇಳಿದು ನಾಪತ್ತೆಯಾಗಿರುವ ಸುಳ್ಯದ ಐವರ್ನಾಡಿನ ಸುಹಾಸ್‌ ಎಂ. (21) ಎಂಬವರ ಮೃತದೇಹ ಇಂದು ಬೆಳಿಗ್ಗೆ ನದಿಯಲ್ಲಿ ಪತ್ತೆಯಾಗಿದೆ.

ಅಗ್ನಿ ಶಾಮಕ ದಳ ಮತ್ತು ಮುಳುಗು ತಜ್ಞರ ನಿರಂತರ ಪ್ರಯತ್ನದಿಂದ ಮೃತದೇಹ ಪತ್ತೆಯಾಗಿದೆ. ಸುಹಾಸ್‌ ಎಂ. ಐವರ್ನಾಡು ಗ್ರಾಮದ ಮಡ್ತಿಲ ಮೀರನಾಥ್ ಗೌಡ ಎಂಬುವರ ಪುತ್ರ ಎಂದು ತಿಳಿದುಬಂದಿದೆ. ಈತ ಶುಕ್ರವಾರ ಮಧ್ಯಾಹ್ನ ಸ್ನೇಹಿತರೊಂದಿಗೆ ನದಿಯಲ್ಲಿ ಸ್ನಾನಕ್ಕೆಂದು ಇಳಿದ ಸಂದರ್ಭ ಘಟನೆ ಸಂಭವಿಸಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಹಾಸ್ ಮೂಡುಬಿದಿರೆಯ ಆಯುರ್ವೇದ ಔಷಧಿ ಕಂಪೆನಿಯೊಂದರ ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದರು.

See also  ಕೊಡಗಿನ ಹುಡುಗಿ ರಾಷ್ಟ್ರೀಯ ಶೂಟಿಂಗ್ ಕೂಟಕ್ಕೆ ಆಯ್ಕೆ, 8ನೇ ತರಗತಿ ಹುಡುಗಿಯ ಪ್ರಚಂಡ ಸಾಧನೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget