ಕರಾವಳಿ

ಪುರಾತನ ಕಾಲದ ನಿಗೂಢ ಗುಹೆ ಪತ್ತೆ, ಹತ್ತು ಹಲವು ಪ್ರಶ್ನೆಗೆ ಸಿಗಬೇಕಿದೆ ಉತ್ತರ

308

ನ್ಯೂಸ್ ನಾಟೌಟ್ : ಪುರಾತನ ಕಾಲದ ನಿಗೂಢ ಗುಹೆಯೊಂದು ಪತ್ತೆಯಾಗಿದ್ದು ಜನರಲ್ಲಿ ಕೌತುಕ ಮೂಡಿಸಿದೆ.

ಕುಮಟಾ ತಾಲೂಕಿನ ಮುರೂರಿನ ಮುಸ್ಗುಪ್ಪೆಯಲ್ಲಿ ಅನಾದಿ ಕಾಲದ ಗುಹೆ ಪತ್ತೆಯಾಗಿದೆ. ಸ್ಥಳೀಯರಲ್ಲಿ ಕುತೂಹಲ ಮತ್ತು ಅಚ್ಚರಿಗೆ ಕಾರಣವಾಗಿದೆ.

ತಾಲೂಕಿನ ಮುಸ್ಗುಪ್ಪೆಯ ರಸ್ತೆ ಬದಿಯಲ್ಲಿ ಮಣ್ಣು ಅಗೆಯುತ್ತಿರುವಾಗ ಗುಹೆಯೊಂದು ಪತ್ತೆಯಾಗಿದೆ. ಮೊದಲು ಭೂಮಿಯ ಪದರವಿರುವ ಜಾಗವಿರಬಹುದೆಂದು ಅಂದಾಜಿಸಲಾಗಿತ್ತು. ಆದರೆ ಅಗೆಯುತ್ತ ಹೋದಂತೆ ಗುಹೆಯ ಆಳ ಜಾಸ್ತಿಯಾಗುತ್ತ ಹೋಗಿದೆ. ಸುಮಾರು ೧೦ ಅಡಿ ಆಳದಲ್ಲಿ ಗುಹೆ ಪತ್ತೆಯಾಗಿದೆ. ಆದರೆ ಇನ್ನೂ ಕೂಡ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಸ್ಥಳೀಯರ ಪ್ರಕಾರ ಈ ಗುಹೆ ಮಿರ್ಜಾನ್ ಕೋಟೆಗೆ ಸಂಪರ್ಕ ಹೊಂದಿರಬಹುದೆಂದು ಹೇಳಲಾಗುತ್ತಿದೆ. ಮಿರ್ಜಾನ್ ಕೋಟೆಯನ್ನು ನಿರ್ಮಿಸಿದ ಆದಿಲ್ ಶಾಹಿಗಳ ಪಾಳೆಗಾರರು ಕೋಟೆ ಮೇಲೆ ಶತ್ರುಗಳ ದಾಳಿಯಾದರೆ ಪಾಳೆಗಾರರು ಸುಭವಾಗಿ ತಪ್ಪಿಸಿಕೊಳ್ಳಲು ಗುಪ್ತ ಸುರಂಗಗಳನ್ನು ಕೊರೆಯುಸುತ್ತಿದ್ದರಂತೆ ಹಾಗೂ ಇದರಲ್ಲಿ ಸುಮಾರು ೧೦೦ ಕ್ಕಿಂತ ಹೆಚ್ಚು ಜನ ಕೂರಬಹುದು ಎಂದು ಇತಿಹಾಸಕಾರರು ತಿಳಿಸಿದ್ದಾರೆ.

See also  ಗೊಡಂಬಿ ಮೊಟ್ಟೆ ಇಟ್ಟ ನಾಟಿ ಕೋಳಿ, ವಿಚಿತ್ರ, ವಿಸ್ಮಯಕಾರಿ ಘಟನೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget