ನ್ಯೂಸ್ ನಾಟೌಟ್: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಜು.28ರಂದು ಭೇಟಿ ನೀಡಿದ್ದಾರೆ.
ಶ್ರೀ ದೇವರ ದರ್ಶನ ಪಡೆದು ವಿಶೇಷ ಪೂಜೆಯನ್ನು ಸಲ್ಲಿಸಿ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡರು. ಈ ವೇಳೆ ದೇವಳದ ವತಿಯಿಂದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿಯವರು ಶಾಲು ಹೊದಿಸಿ ಮಾಜಿ ಸಚಿವರನ್ನು ಗೌರವಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಸೌಮ್ಯ ಭರತ್, ಮಾಸ್ಟರ್ ಪ್ಲ್ಯಾನ್ ಸಮಿತಿ ಸದಸ್ಯರಾದ ಪವನ್ ಕುಮಾರ್, ಲೋಲಾಕ್ಷ ಕೈಕಂಬ, ಸತೀಶ್ ಕುಜುಗೋಡು, ಮಾಸ್ಟರ್ ಪ್ಲ್ಯಾನ್ ಮಾಜಿ ಸದಸ್ಯರಾದ ಶಿವರಾಮ ರೈ, ದೇವಳದ ಎಕ್ಸಿಕ್ಯೂಟಿವ್ ಆಫೀಸರ್ ಆಗಿರುವ ಅರವಿಂದ ಅಯ್ಯಪ್ಪ, ದೇವಳದ ಪ್ರೊಟೋಕಾಲ್ ಶಿಷ್ಟಾಚಾರ ಸಿಬ್ಬಂದಿ ಹಾಜರಿದ್ದರು.