ಕರಾವಳಿಕ್ರೀಡೆಕ್ರೀಡೆ/ಸಿನಿಮಾಪುತ್ತೂರುವೈರಲ್ ನ್ಯೂಸ್ಸುಳ್ಯ

ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಭೇಟಿ, ಪತ್ನಿ ಸಮೇತ ದೇಗುಲದಲ್ಲಿ ಮಹಾಪೂಜೆ

198

ನ್ಯೂಸ್ ನಾಟೌಟ್: ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪ್ರಸಿದ್ಧ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಮಂಗಳವಾರ(ನ.19) ಭೇಟಿ ನೀಡಿದ್ದರು.

ಪತ್ನಿ ಸಮೇತ ದೇಗುಲಕ್ಕೆ ಆಗಮಿಸಿ ದೇವರಿಗೆ ಆಶ್ಲೇಷ ಬಲಿ ಪೂಜೆ, ಮಹಾಪೂಜೆ ಹಾಗೂ ಅಭಿಷೇಕ ನೆರವೇರಿಸಿದರು. ಈ ವೇಳೆ, ಸೂರ್ಯಕುಮಾರ್ ಯಾದವ್ ದಂಪತಿಗೆ ದೇವಸ್ಥಾನದ ವತಿಯಿಂದ ಗೌರವಾರ್ಪಣೆ ಮಾಡಲಾಯಿತು.

ಈ ಹಿಂದೆ ಭಾರತ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಗೆದ್ದ ಬಳಿಕ ಸೂರ್ಯಕುಮಾರ್ ಯಾದವ್ ಉಡುಪಿಯ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದರು. ಟಿ20 ವಿಶ್ವಕಪ್ ​ಗೂ ಮುನ್ನ ಸೂರ್ಯಕುಮಾರ್ ಯಾದವ್ ಭಾರತ ತಂಡ ಟ್ರೋಫಿ ಗೆಲ್ಲಲು ಮಾರಿಯಮ್ಮನಿಗೆ ವಿಶೇಷ ಹರಕೆ ಹೊತ್ತಿದ್ದರು ಎನ್ನಲಾಗಿತ್ತು. ಅದರಂತೆ ಬಳಿಕ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ಸಲ್ಲಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಅವರು ಭಾರತ ಟಿ20 ಕ್ರಿಕೆಟ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದರು.

Click

https://newsnotout.com/2024/11/kannada-news-cinema-director-kannada-news-actor-arrested-serial/
https://newsnotout.com/2024/11/tirupati-tirumala-hindu-temple-kannada-news-1000-above-workers-other-relegious/
https://newsnotout.com/2024/11/75-year-old-lady-r-by-begging-man-kannada-news-d-viral-news-d/
https://newsnotout.com/2024/11/elon-musk-kannada-news-space-x-kannada-news-isro-issue-d/
https://newsnotout.com/2024/11/kannada-news-geethanjali-keerthi-suresh-kananda-news-d-d/
https://newsnotout.com/2024/11/4-month-pregnent-lady-kannada-news-viral-news-nomore-husband/
See also  ಕಲ್ಲುಗುಂಡಿ ಸಂಪತ್ ಕುಮಾರ್ ಕೊಲೆ ಪ್ರಕರಣ : ಒಂದನೇ ಆರೋಪಿಗೆ ಷರತ್ತು ಬದ್ಧ ಜಾಮೀನು ಮಂಜೂರು
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget