ನ್ಯೂಸ್ ನಾಟೌಟ್: ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ ಶಾರಿಖ್ ಸ್ಥಳ ಮಹಜರು ಮಾಡಲು ಕರೆ ತರಲಾಗಿದೆ. ಎನ್ಐಎ ಅಧಿಕಾರಿಗಳು ಆರೋಪಿಯನ್ನು ತೀರ್ಥಹಳ್ಳಿ ಹಾಗೂ ಶಿವಮೊಗ್ಗಕ್ಕೆ ಸ್ಥಳ ಮಹಜರ್‌ಗೆ ಕರೆ ತಂದರು.
ತೀರ್ಥಹಳ್ಳಿ ಸೊಪ್ಪುಗುಡ್ಡೆ ಮೂಲದ ಶಾರಿಖ್‌ನನ್ನು ಕೆಎಸ್ಆರ್‌ಟಿಸಿ ಬಸ್ಸ್ ನಿಲ್ದಾಣದ ಎದುರು ಅವರ ನಿವಾಸದ ಬಳಿ ಸೇರಿದಂತೆ ಕೆಲವೆಡೆ ಸ್ಥಳ ಮಹಜರ್ ನಡೆಸಿದ್ದಾರೆ. ಇಂದು ಬೆಳಿಗ್ಗೆ ಆರೋಪಿಯನ್ನು ತೀರ್ಥಹಳ್ಳಿಗೆ ಕರೆದೊಯ್ದಿದ್ದಾರೆ. ಸೊಪ್ಪುಗುಡ್ಡೆ ಶಾರಿಖ್‌ನ ನಿವಾಸಕ್ಕೆ ಬೀಗ ಹಾಕಲಾಗಿತ್ತು.