ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆ, ಕುದುರೆ ಮುಖ ಸೇರಿದಂತೆ ಬೆಳ್ತಂಗಡಿ ವ್ಯಾಪ್ತಿಯ ‘ನೇತ್ರಾವತಿ ಪೀಕ್ ಪ್ರದೇಶ’ ಸುತ್ತಮುತ್ತ ಸೇರಿದಂತೆ ಚಾರಣಕ್ಕೆ ವಿಧಿಸಿದ್ದ ನಿಷೇಧವನ್ನು ಜಿಲ್ಲಾ ಆಡಳಿತ ಮಂಡಳಿ ವಾಪಸ್ ಪಡೆದುಕೊಂಡಿದೆ.
ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಮಲೆನಾಡ ಭಾಗದಲ್ಲಿ ಭಾರೀ ಮಳೆ ಸುರಿದಿತ್ತು. ಗುಡ್ಡ ಕುಸಿತ, ಸಿಡಿಲು – ಗುಡುಗು ಪ್ರಕರಣ ಜಾಸ್ತಿಯಾಗಿತ್ತು. ಈ ನಿಟ್ಟಿನಲ್ಲಿ ಪ್ರವಾಸಿಗರ ಹಿತ ಕಾಯುವುದಕ್ಕಾಗಿ ನಿಷೇಧವನ್ನು ಹೇರಲಾಗಿತ್ತು. ಹಲವು ದಿನಗಳ ಬಳಿಕ ಇದೀಗ ಜಿಲ್ಲಾಧಿಕಾರಿಗಳು ಇದೀಗ ಮತ್ತೆ ಹೋಮ್ ಸ್ಟೇ, ರೆಸಾರ್ಟ್, ಅರಣ್ಯ ಇಲಾಖೆಯಿಂದ ಕೈಗೊಳ್ಳುವ ಚಾರಣ-ಸಾಹಸ ಚಟುಚಟಿಕೆಗಳನ್ನು ಮುಂಜಾಗ್ರತಾ ಕ್ರಮಗಳೊಂದಿಗೆ ನಡೆಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ತಿಳಿಸಿದ್ದಾರೆ.