ಕರಾವಳಿ

ಕುದ್ಮಾರು: ಆ್ಯಸಿಡ್ ಸೇವಿಸಿ ವ್ಯಕ್ತಿ ಆತ್ಮಹತ್ಯೆ

ಸವಣೂರು: ರಬ್ಬರ್ ಗೆ ಬೆರೆಸುವ ಆ್ಯಸಿಡ್ ಸೇವಿಸಿ ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕುದ್ಮಾರು ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು ಮೂಲತಃ ಕೇರಳದ ಶ್ರೀಧರನ್ ಕಾಣಿ ಎಂದು ಗುರುತಿಸಲಾಗಿದೆ.

ಶ್ರೀಧರನ್ ಕುದ್ಮಾರಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು, ರಬ್ಬರ್ ಟ್ಯಾಪಿಂಗ್ ವೃತ್ತಿ ಮಾಡುತ್ತಿದ್ದರು. ಇವರು ರಬ್ಬರ್ ಶೀಟ್ ಮಾಡಲು ಉಪಯೋಗಿಸುವ ಆ್ಯಸಿಡ್ನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಈ ವೇಳೆ ಜೊತೆಗಿದ್ದ ರೆಝಿ ಆರ್ ಸೋಮರಾಜ್ ಎಂಬವರು ಸ್ಥಳೀಯರ ಸಹಾಯದಿಂದ ಪುತ್ತೂರು ಆಸ್ಪತ್ರೆಗೆ ದಾಖಲಿಸಿ, ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಸಂಪಾಜೆಯಲ್ಲಿ ಮಳೆ ಅವಾಂತರ, ಮನೆಗೆ ಹಾನಿ

ಸುಳ್ಯ:10ರ ಎಳೆವಯಸ್ಸಲ್ಲೇ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಸಾಧನೆ;ಬಾಲ ಪ್ರತಿಭೆ ಸೋನಾ ಅಡ್ಕಾರ್‌ಗೆ ‘ಸ್ವಸ್ತಿಕ್ ಕಲಾ ಪ್ರಶಸ್ತಿ’ ಗರಿ

ಆ.10 ರಿಂದ 22ರ ತನಕ ಅಗ್ನಿಪಥ ನೇಮಕಾತಿ