ಕರಾವಳಿ

ಬಸ್‌ನಿಂದ ಪ್ರಯಾಣಿಕರ ಕೆಳಕ್ಕಿಳಿಸಿದ KSRTC ಕಂಡೆಕ್ಟರ್..!

ನ್ಯೂಸ್ ನಾಟೌಟ್: ಕೆಲವು ಬಸ್ ಕಂಡೆಕ್ಟರ್ ಪ್ರಯಾಣಿಕರು ಚಿಲ್ಲರೆ ಕೊಡಲಿಲ್ಲ ಎಂದು ಗೊಣಗುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಕಂಡೆಕ್ಟರ್ ಮಡಿಕೇರಿಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಸುಳ್ಯದ ಅಡ್ಕಾರು ಬಳಿ ಬಸ್ಸಿನಿಂದ ಇಳಿಸಿ ಹೋದ ಅಮಾನವೀಯ ಘಟನೆ ಜ.19 ರಂದು ನಡೆದಿದೆ.

ಮಡಿಕೇರಿಯಿಂದ ಮಂಗಳೂರಿಗೆ ಕೆ ಎ 21 ಎಫ್‌ 0060 ಬಸ್ಸಿನಲ್ಲಿ ಉತ್ತರ ಭಾರತ ಮೂಲದ ಕಾರ್ಮಿಕರು ಪ್ರಯಾಣಿಸುತ್ತಿದ್ದರು. ಈ ವೇಳೆ ಅವರು ಮಂಗಳೂರಿಗೆ ಟಿಕೇಟ್ ಪಡೆದಿದ್ದರು. ಸಣ್ಣ ಮಕ್ಕಳಿಗೂ ಟಿಕೇಟ್ ಪಡೆಯಲಾಗಿತ್ತು. ಆದರೆ ಕಂಡೆಕ್ಟರ್ ನಮ್ಮನ್ನು ಅರ್ಧ ದಾರಿಯಲ್ಲಿ ಬಸ್ಸಿನಿಂದ ಇಳಿಸಿ ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. ಪುಟ್ಟ ಮಕ್ಕಳಿದರೂ ಕಂಡೆಕ್ಟರ್ ಕರುಣೆ ತೋರಿಸದೆ ಬಸ್ ನಿಂದ ಕೆಳಕ್ಕೆ ಇಳಿಸಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಸ್ತೆ ಬದಿಯಲ್ಲಿ ಕಣ್ಣೀರಿಡುತ್ತಾ ಕುಳಿತಿದ್ದವರನ್ನುಸ್ಥಳಿಯರಾದ ಜಯರಾಮ್ ಅಡ್ಕಾರ್ ಮತ್ತು ಸುಬ್ರಮಣ್ಯ ಪ್ರಸಾದ್ ನೇತೃತ್ವದಲ್ಲಿ ವಾಪಸ್ ಮಂಗಳೂರು ಗೆ ಕಳುಹಿಸಿ ಕೊಡಲಾಯಿತು.

Related posts

ಮಹಿಳೆ ಜತೆ ಪುತ್ತೂರು ಶಾಸಕರಿಗೆ ಸಂಬಂಧ ಇದ್ದದ್ದು ನಿಜಾನಾ..? ಸ್ವತಃ ಶಾಸಕರೇ ಬಿಚ್ಚಿಟ್ರು ಸ್ಫೋಟಕ ಸತ್ಯ..!

ರಕ್ತದಾನ ಮಾಡಿ ಹುಟ್ಟು ಹಬ್ಬ ಆಚರಿಸಿಕೊಂಡ ಕೆವಿಜಿ ಮೆಡಿಕಲ್ ಕಾಲೇಜಿನ ಮಹಿಳಾ ಉದ್ಯೋಗಿ..! ಜೀವ ಉಳಿಸುವ ಮಾನವೀಯ ಕಾರ್ಯಕ್ಕೆ ಎಲ್ಲರ ಮೆಚ್ಚುಗೆ

ಮಂಗಳೂರು: BMW ಕಾರಿನಲ್ಲಿ ಅನ್ಯಕೋಮಿನ ಯುವಕರೊಂದಿಗೆ ಹಿಂದೂ ಯುವತಿಯ ಮೋಜು ಮಸ್ತಿಯ ಜರ್ನಿ..!, ಕಾರಿನಲ್ಲಿದ್ದವರು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದೇಗೆ..?