ಕರಾವಳಿಕೊಡಗುಪುತ್ತೂರು

ಪ್ರಯಾಣಿಕರೇ ಗಮನಿಸಿ, ಮಾ.1ರಂದು ಕೆಎಸ್ಆರ್ ಟಿಸಿ ಬಸ್ ಸೇವೆ ಇರಲ್ಲ..!

385

ನ್ಯೂಸ್ ನಾಟೌಟ್ : ರಾಜ್ಯ ಸರ್ಕಾರದ ಬಜೆಟ್ ಹಿನ್ನೆಲೆಯಲ್ಲಿ ಸರ್ಕಾರಿ ಸಾರಿಗೆ ನೌಕರರಿಗೆ ಈ ಹಿಂದೆ ಸಲ್ಲಿಸಿದ್ದ ಬೇಡಿಕೆಗಳು ಈಡೇರದೆ ನಿರಾಸೆಯಾಗಿದ್ದು, ಮಾರ್ಚ್ 1 ರಂದು ರಾಜ್ಯದಾದ್ಯಂತ ಸರ್ಕಾರದ ವಿರುದ್ಧ ಸಾರಿಗೆ ನೌಕರರು ತೀವ್ರ ಮುಷ್ಕರ ನಡೆಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಫೆ. 17 ರಂದು ಸಿಎಂ ಬಸವರಾಜ್ ಬೊಮ್ಮಾಯಿ ಮಂಡಿಸಿರುವ ಬಜೆಟ್‌ನಲ್ಲಿ ಸಾರಿಗೆ ನೌಕರರ 7 ನೇ ವೇತನದ ಬಗ್ಗೆ ಯಾವುದೇ ಬೇಡಿಕೆಗಳು ಈಡೇರಿಸಿಲ್ಲ . ಈ ಕಾರಣಗಳಿಂದ ಪ್ರಮುಖ ಬೇಡಿಕೆಗಳ ಪಟ್ಟಿಯೊಂದಿಗೆ ಬೀದಿಗಿಳಿದು ಪ್ರತಿಭಟಿಸಲು ನಿರ್ಧಾರಮಾಡಿರುವುದಾಗಿ ವರದಿ ತಿಳಿಸಿದೆ.
ಮಾಜಿ. ಸಿ.ಎಂ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಾರಿಗೆ ನೌಕರರಿಗೆ 7 ನೇ ವೇತನ ಆಯೋಗ ಜಾರಿ ಮಾಡುವ ಭರವಸೆಯನ್ನು ನೀಡಿದ್ದರು. ಆದರೆ ಬಜೆಟ್‌ನಲ್ಲಿ ಬಸವರಾಜ್ ಬೊಮ್ಮಾಯಿ ಈ ಬಗ್ಗೆ ಏನೂ ಘೋಷಿಸಿಲ್ಲ. ಈ ಭರವಸೆಗಳು ಬರೀ ಮಾತಿನಲ್ಲಿ ಮಾತ್ರ ಉಳಿದಿದೆ ಎಂದು ಸಿಡಿದೆದ್ದ ಸರ್ಕಾರಿ ಸಾರಿಗೆ ನೌಕರರು ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕೆಂದು ಸಾರಿಗೆ ಮುಷ್ಕರಕ್ಕೆ ಕರೆ ನೀಡಿದ್ದಾರೆ.

  • ಈ ಹಿಂದಿನ ಮುಷ್ಕರದ ಸಮಯದಲ್ಲಿ ಆಗಿರುವ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಬೇಕು.
  • ಸರ್ಕಾರ ನೀಡಿರುವ ಲಿಖಿತ ಭರವಸೆಯಂತೆ ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಮತ್ತು ಸರಿ ಸಮಾನ ವೇತನ ನೀಡಬೇಕು.
  • ಕಾರ್ಮಿಕ ಸಂಘಟನೆಗಳ ಚುನಾವಣೆ ನಡೆಸಬೇಕು.
  • ಸಾರಿಗೆ ಸಂಸ್ಥೆಯನ್ನು ಖಾಸಾಗೀಕರಣ ಮಾಡುವ ಯೋಜನೆಗಳನ್ನು ಕೈ ಬಿಡಬೇಕು.

2021 ರಲ್ಲಿ ಸಾರಿಗೆ ನೌಕರರು ಪ್ರಮುಖ ಬೇಡಿಕೆಗಳಿಗೆ ತೀವ್ರ ಹೋರಾಟ ನೆಡಸಿದ್ದರು. ಆಗಿನ ೨ ತಿಂಗಳ ನಿರಂತರ ಹೋರಾಟದಿಂದ ಅಂದು ಪ್ರಯಾಣಿಕರು ಪರದಾಡುವಂತಾಯಿತು ಮತ್ತು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅನೇಕ ನೌಕರರು ಉದ್ಯೋಗ ಕಳೆದುಕೊಳ್ಳುವಂತಾಗಿತ್ತು, ಆ ನಂತರದ ದಿನಗಳಲ್ಲಿ ಅವರನ್ನು ಮತ್ತೆ ಸೇರಿಸಿಕೊಳ್ಳಲಾಯಿತಾದರೂ ಅವರ ಬೇಡಿಕೆಗಳು ಇನ್ನೂ ಈಡೇರಿಲ್ಲ ಅನ್ನುತ್ತಾರೆ ಸಾರಿಗೆ ನೌಕರರು.
ಆದರೆ ಈ ವರ್ಷ ಬೇಡಿಕೆಳನ್ನು ಈಡೇರಿಸದಿದ್ದಲ್ಲಿ ಕುಟುಂಬ ಸಮೇತ ಬೀದಿಗಿಳಿದು ಹೋರಾಟ ಮಾಡುವುದಾಗಿ ಸಾರಿಗೆ ನೌಕರರು ಎಚ್ಚರಿಕೆ ನೀಡಿದ್ದಾರೆ.

See also  ಸ್ವಾತಂತ್ರ್ಯ ಹೋರಾಟಗಾರರ ಕನಸು ನನಸಾಗಿಸಲು ಪ್ರಧಾನಿ ‘ಪಂಚ’ ಪ್ರತಿಜ್ಞೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget