ಕರಾವಳಿ

ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗದ ಉದ್ಯೋಗಿಯ ಸಂಶಯಾಸ್ಪದ ಸಾವು! ರೈಲ್ವೆ ಟ್ರಾಕ್ ನಲ್ಲಿತ್ತು ಮೃತದೇಹ!

ನ್ಯೂಸ್ ನಾಟೌಟ್: ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗದ ಡ್ರೈವರ್ ಆಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯ ಮೃತದೇಹ ಕಾಣಿಯೂರು ರೈಲ್ವೇ ಟ್ರ್ಯಾಕ್ ನಲ್ಲಿ ಎ.7 ರಂದು ದೊರಕಿರುವುದಾಗಿ ವರದಿ ತಿಳಿಸಿದೆ.

ಸುಮಾರು 8 ವರ್ಷಗಳಿಂದ ಕೆಎಸ್ಆರ್ ಟಿಸಿ ಉದ್ಯೋಗಿಯಾಗಿದ್ದ ಇವರು ರಾತ್ರಿ ಕರ್ತವ್ಯದಿಂದ ಮುಗಿಸಿ ಕೆಎಸ್ಆರ್ ಟಿಸಿ ಕಂಡಕ್ಟರ್ ಕಮ್ ಡ್ರೈವರ್ ಬೆಳಂದೂರು ಗ್ರಾಮದ ಕುಸುಮಾಧರ ಗೌಡ ಅಭೀರ (34 ವ.) ಅವರ ಮೃತದೇಹ ಸಂಶಯಾಸ್ಪದವಾಗಿ ರೈಲ್ವೆ ಟ್ರಾಕ್ ನಲ್ಲಿ ಸಿಕ್ಕಿದೆ. ಮೃತರು 1 ವರ್ಷದ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಎಂದು ಮಾಹಿತಿ ದೊರಕಿದೆ.

ದುರ್ಘಟನೆ ಕಾಣಿಯೂರು ರೈಲ್ವೇ ಟ್ರ್ಯಾಕ್ ನಲ್ಲಿ ಮಧ್ಯರಾತ್ರಿ ನಡೆದಿದ್ದು, ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು ತನಿಖೆ ನಡೆಸುತ್ತಿದ್ದಾರೆ.

Related posts

ಪಿಯುಸಿ ಫಲಿತಾಂಶ : ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ವಾಣಿಜ್ಯ ವಿಭಾಗದಲ್ಲಿ ಶೇ.100 ಫಲಿತಾಂಶ, ಇಲ್ಲಿದೆ ಸಂಪೂರ್ಣ ವಿವರ

ಬೋರ್‌ವೆಲ್‌ ಲಾರಿ ಡಿಕ್ಕಿ; ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವು

ಶ್ರೇಷ್ಠ ವೈದ್ಯಕೀಯ ಪ್ರಶಸ್ತಿ ಪುರಸ್ಕೃತ ಡಾ. ಅಜೇಯ್‌ ಅವರಿಗೆ ಪುತ್ತಿಲ ಪರಿವಾರದಿಂದ ಗೌರವ ಸನ್ಮಾನ