ನ್ಯೂಸ್ ನಾಟೌಟ್: ಕರ್ತವ್ಯದ ವೇಳೆಯಲ್ಲೇ ಮಾರ್ಗಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ್ದ ksrtc ಬಸ್ ಚಾಲಕ ಎ.ಆರ್.ಮುಲ್ಲಾ ಎಂಬಾತನನ್ನು ಸಾರಿಗೆ ಇಲಾಖೆ ಅಮಾನತ್ತು ಮಾಡಿದೆ.
ಹಾನಗಲ್ ಘಟಕದ ಚಾಲಕ ಎ.ಆರ್.ಮುಲ್ಲಾ ಕರ್ತವ್ಯದ ವೇಳೆ ರಸ್ತೆ ಪಕ್ಕ ಜನರಿದ್ದ ಬಸ್ ನಿಲ್ಲಿಸಿ ನಮಾಜ್ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.
ಇದರ ಬೆನ್ನಲ್ಲೇ ಇದೀಗ ಕರ್ತವ್ಯಲೋಪ ಆರೋಪದಲ್ಲಿ ಚಾಲಕ ಎ.ಆರ್.ಮುಲ್ಲಾನನ್ನು ಅಮಾನತ್ತುಗೊಳಿಸಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶಿಸ್ತುಪಾಲನೆ ಅಧಿಕಾರಿ ಇಂದು (ಮೇ 01)ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ಬಸ್ ನಲ್ಲಿ ಪ್ರಯಾಣಿಕರಿದ್ದರೂ ಚಾಲಕನೋರ್ವ ಬಸ್ ನಿಲ್ಲಿಸಿ ನಮಾಜ್ ಮಾಡಿದ್ದಾನೆ. ನಿನ್ನೆ (ಏಪ್ರಿಲ್ 29) ಸಂಜೆ ಘಟನೆ ನಡೆದಿದೆ.
ಹುಬ್ಬಳ್ಳಿಯಿಂದ ಹಾವೇರಿಯತ್ತ ಹೊರಟಿದ್ದ ಕೆಎಸ್ ಆರ್ ಟಿಸಿ ಬಸ್ ಅನ್ನು ಮಾರ್ಗ ಮಧ್ಯ ನಿಲ್ಲಿಸಿ ನಮಾಜ್ ಮಾಡಿದ್ದಾನೆ. #ksrtc pic.twitter.com/1iRL32QWiW— News Not Out (@News_Not_Out) April 30, 2025
ವಿಚಾರಣೆ ಮುಗಿಯುವವರೆಗೂ ಅಮಾನತ್ತು ಮಾಡಿ ಆದೇಶಿಸಿದ್ದು, ಘಟನೆ ಬಗ್ಗೆ ಸಂಪೂರ್ಣ ವಿವರಣೆ ನೀಡುವಂತೆ ನೋಟಿಸ್ ನೀಡಲಾಗಿದೆ.
ಕರ್ತವ್ಯದಲ್ಲಿರುವಾಗ ಮಾರ್ಗ ಮಧ್ಯ ಜನರಿದ್ದ KSRTC ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ..! ವಿಡಿಯೋ ವೈರಲ್