ಕರಾವಳಿರಾಜಕೀಯರಾಜ್ಯವೈರಲ್ ನ್ಯೂಸ್

ಟಿಕೆಟ್‌ ದರ ಏರಿಸದಿದ್ದರೆ KSRTC ಸಂಸ್ಥೆ ಉಳಿಯಲ್ಲ ಎಂದ ನಿಗಮದ ಅಧ್ಯಕ್ಷ..! ದರ ಹೆಚ್ಚಳ ಪುರುಷರಿಗೆ ಮಾತ್ರವಾ..? ಶಾಸಕ ಹೇಳಿದ್ದೇನು..?

ನ್ಯೂಸ್ ನಾಟೌಟ್: ಕಳೆದ ತ್ರೈಮಾಸಿಕದಲ್ಲಿ 295 ಕೋಟಿ ರೂ. ನಷ್ಟವಾಗಿದೆ. ಟಿಕೆಟ್‌ ದರ (Ticket Price) ಏರಿಸದೇ ಇದ್ದರೆ ಕೆ.ಎಸ್‌.ಆರ್‌.ಟಿ.ಸಿ (KSRTC) ಸಂಸ್ಥೆ ಉಳಿಯುವುದಿಲ್ಲ ಎಂದು ನಿಗಮದ ಅಧ್ಯಕ್ಷ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ.

ಸದ್ಯದಲ್ಲೇ ಕೆ.ಎಸ್‌.ಆರ್‌.ಟಿ.ಸಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಲಾಗುವುದು. ಮೊನ್ನೆ ನಿಗಮದ ಮೀಟಿಂಗ್ ಮುಗಿದಿದ್ದು 15-20% ದರ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಸಿಎಂ ಮುಂದೆ ಇಟ್ಟಿದ್ದೇವೆ ಎಂದು ಹೇಳಿದ್ದಾರೆ. ಟಿಕೆಟ್ ದರ ಹೆಚ್ಚಳ ಮಾಡುವುದರಿಂದ ಪುರುಷ ಪ್ರಯಾಣಿಕರಿಗೆ ಹೊರೆಯಾಗುತ್ತದೆ ಎನ್ನುವ ಪ್ರಶ್ನೆಯೇ ಇಲ್ಲ. ಶಕ್ತಿ ಯೋಜನೆಯಲ್ಲಿನ ಮಹಿಳಾ ಪ್ರಯಾಣಿಕರ ಟಿಕೆಟ್ ದರ ಕೂಡ ಹೆಚ್ಚಾಗಲಿದ್ದು ಅದನ್ನು ಸರ್ಕಾರ ಭರಿಸುತ್ತದೆ ಎಂದು ತಿಳಿಸಿದರು.

ತೈಲ ಬೆಲೆ ಏರಿಕೆ, ಹೊಸ ಬಸ್‌ ಗಳ ಖರೀದಿ ಮುಂತಾದ ಖರ್ಚುಗಳಿಂದ ಸಂಸ್ಥೆಗೆ ಹೊರೆಯಾಗಿದೆ. ಅಲ್ಲದೇ ಈ ಬಾರಿ ಸಾರಿಗೆ ಸಂಸ್ಥೆಯ ನೌಕರರ ವೇತನ ಪರಿಷ್ಕರಣೆ ಮಾಡಲಿದ್ದೇವೆ. ಬಿಡಿ ಭಾಗಗಳ ದರ ಏರಿಕೆಯಾಗಿದೆ. ಈ ಎಲ್ಲಾ ಕಾರಣಗಳಿಂದ ಟಿಕೆಟ್ ದರ ಹೆಚ್ಚಳ ಅನಿವಾರ್ಯ ಎಂದು ಶಾಸಕ ತಿಳಿಸಿದ್ದಾರೆ. ಕಳೆದ ತ್ರೈಮಾಸಿಕದಲ್ಲಿ ನಿಗಮಕ್ಕೆ 295 ಕೋಟಿ ರೂ. ನಷ್ಟವಾಗಿದೆ. ಪ್ರತಿ ಬಾರಿಯೂ ನಷ್ಟವನ್ನು ಸರಿದೂಗಿಸಿಕೊಡುವಂತೆ ಸರ್ಕಾರವನ್ನು ಕೇಳುವುದು ಸರಿಯಲ್ಲ. ನಷ್ಟವನ್ನು ಸರಿದೂಗಿಸಲು ಹಾಗೂ ಸಂಸ್ಥೆಯನ್ನು ಉಳಿಸಬೇಕಾದರೆ ಟಿಕೆಟ್ ದರ ಹೆಚ್ಚಿಗೆ ಮಾಡಲೇಬೇಕು ಎಂದು ಹೇಳಿದ್ದಾರೆ.

Click 👇

https://newsnotout.com/2024/07/donald-trump-under-attack-by-unkwon-kannada-news-modi-replay
https://newsnotout.com/2024/07/pooja-gandhi-acts-in-serial-kannada-news-divya-viral-news
https://newsnotout.com/2024/07/love-with-married-kannada-news-griculture-issue-kananda-news
https://newsnotout.com/2024/07/bengaluru-police-cyber-issue-kannada-news-call-and-threat
https://newsnotout.com/2024/07/after-46-years-jagannath-temple-treasury-reopn-kannada-news-today

Related posts

ಸುಳ್ಯ ತಾಲೂಕಿನ ಸಾಹಿತ್ಯ ಪ್ರಿಯರಿಗೆ ಸಂಭ್ರಮದ ದಿನ, ವಿಧಾನಸೌಧದಲ್ಲಿ ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಾ. ಪುರುಷೋತ್ತಮ ಬಿಳಿಮಲೆ

ನೇರಳೆ ಹಣ್ಣು ಕೊಯ್ಯಲು ಮರ ಹತ್ತಿದ 13ರ ಬಾಲಕನಿಗೆ ವಿದ್ಯುತ್ ಶಾಕ್..! 7ನೇ ತರಗತಿ ವಿದ್ಯಾರ್ಥಿ ಶಾಲೆ ಆವರಣದಲ್ಲೇ ಮೃತ್ಯು..!

ತಮ್ಮನನ್ನು ಮಾತ್ರ ಅಪ್ಪ-ಅಮ್ಮ ಪ್ರೀತಿಸ್ತಾರೆಂದು ಸಹೋದರನನ್ನೇ ಕೊಂದ ಅಕ್ಕ..! ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ..!