Latest

ಕೆಎಸ್ ಆರ್‌ಟಿಸಿ ಬಸ್‌ ಒಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಸಿಬ್ಬಂದಿ ;ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ

478
Spread the love

ನ್ಯೂಸ್‌ ನಾಟೌಟ್: ಕೆಎಸ್ ಆರ್‌ಟಿಸಿ ಮೆಕ್ಯಾನಿಕ್ ಬಸ್‌ನಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬಗ್ಗೆ ವರದಿಯಾಗಿದೆ. ಬೆಳಗಾವಿಯ ಡಿಪೋ 1 ರಲ್ಲಿ ಅಳ್ನಾವರ್ ಬೆಳಗಾವಿ ಬಸ್‌ನಲ್ಲಿ ಮೆಕ್ಯಾನಿಕ್ ಆತ್ಮಹತ್ಯೆಗೆ ಶರಣಾಗಿದ್ದು,‌ಮೃತ ನೌಕರನನ್ನು ಕೇಶವ ಕಮಡೊಳಿ (57) ಎಂದು ಗುರುತಿಸಲಾಗಿದೆ.

ಕಾರಣವೇನು?

ಬೆಳಗಾವಿಯ ಹಳೆ ಗಾಂಧಿ ನಗರದ ನಿವಾಸಿ ಕೇಶವ್ ಎಂಬವರು ಬಸ್ ವಾಶಿಂಗ್ ನಲ್ಲಿ ಬಸ್‌ಗಳ ಪಂಚರ್ ತೆಗೆಯುವ ಕೆಲಸ‌ ಮಾಡುತ್ತಿದ್ದರು. ಪ್ರತಿ ನಿತ್ಯ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದು, ಇತ್ತೀಚೆಗೆ ಅವರಿಗೆ ಬೆನ್ನು ನೋವಿನ ಸಮಸ್ಯೆ ಕಾಡುತ್ತಿತ್ತು. ಹೀಗಾಗಿ ಅವರಿಗೆ ಬೆನ್ನು ನೋವಿದ್ದರೂ ಸಹ ಪಂಚರ್ ತೆಗೆಯುವ ಕೆಲಸವನ್ನು ಅಧಿಕಾರಿಗಳು ಹಚ್ಚಿದ್ದರು ಎನ್ನಲಾಗಿದೆ.ಡಿಪೋ ಮ್ಯಾನೇಜರ್ ಲಿಂಗರಾಜ್ ಲಾಠಿ, ಸಹಾಯಕ ಕಾರ್ಯ ಅಧೀಕ್ಷಕ ಅನಿಲ್ ಬಾಂದೇಕರ್ ಗೆ ಕುಟುಂಬಸ್ಥರು ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ ಎನ್ನಲಾಗಿದೆ.

ಇದೀಗ ಕೆಲಸದ ಒತ್ತಡ ತಡೆದಕೊಳ್ಳಲಾಗದೇ ಕೇಶವ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ ಎನ್ನಲಾಗಿದ್ದು, ಅಧಿಕಾರಿಗಳ ವಿರುದ್ಧ ಮೃತ ಕೇಶವ್ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಮಾರ್ಕೆಟ್ ಪೊಲೀಸ್ ಠಾಣೆಯ ಪೊಲೀಸರು ಭೇಟಿ ‌ನೀಡಿ ಪರಿಶೀಲನೆ ನಡೆಸಿದ್ದಾರೆ.

See also  'ಮುಸ್ಲಿಮರು ಮಕ್ಕಳನ್ನು ಹುಟ್ಟಿಸುವುದು ಬಿಟ್ಟು ಬೇರೇನು ಮಾಡುತ್ತಿದ್ದಾರೆ..?' ಎಂದ ಮಾಜಿ ಸಂಸದ..! ಪ್ರತಾಪ್‌ ಸಿಂಹ ವಿರುದ್ಧ FIR ದಾಖಲು
  Ad Widget   Ad Widget   Ad Widget