ಕರಾವಳಿಪುತ್ತೂರು

ಪುತ್ತೂರು: ಕ.ರಾ.ರ.ಸಾ ನಿಗಮ ಬಿಸಿರೋಡ್ ಘಟಕದಲ್ಲಿ ಮೂರನೇ ವರ್ಷದ ‘ಆಟಿದ ಗಮ್ಮತ್ತು’, ಆಟಿ ಸಂಭ್ರಮದಲ್ಲಿ 50ಕ್ಕೂ ಹೆಚ್ಚು ಬಗೆಯ ತಿನಿಸುಗಳು

228

ನ್ಯೂಸ್ ನಾಟೌಟ್ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮೂರನೇ ವರ್ಷದ ಆಟಿದ ಗಮ್ಮತ್ತು ಸಂಭ್ರಮ ಕಾರ್ಯಕ್ರಮ ಬಿಸಿ ರೋಡ್ ಡಿಪೋ ಸಭಾಭವನದಲ್ಲಿ ಶನಿವಾರ ಜುಲೈ 22ರಂದು ನಡೆಯಿತು.

ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ, ಮೂರನೇ ವರ್ಷದ ಆಟಿದ ಗಮ್ಮತ್ತು ಸಂಭ್ರಮ ಕಾರ್ಯಕ್ರಮ ಘಟಕದ ಪ್ರತಿಯೊಬ್ಬ ಕಾರ್ಮಿಕರ ಶ್ರಮ ಸೇವೆ ಸಹಕಾರದಿಂದ ಉತ್ತಮ ರೀತಿಯಲ್ಲಿ ಕೆಲಸ ನಡೆಯುತ್ತಿರುವುದು ಸಂತೋಷದ ವಿಷಯವಾಗಿದೆ .ಅಲ್ಲದೆ ಉತ್ತರಕನ್ನಡದ ಆಷಾಢ ಮಾಸದ ತಿಂಡಿ ತಿನಿಸುಗಳು ಹಾಗು ದಕ್ಷಿಣ ಕನ್ನಡದ ವಿವಿಧ ತಿಂಡಿ ತಿನಿಸುಗಳನ್ನು ಸ್ವತಃ ತಯಾರಿಸಿ ತಂದಿರುವುದರೊಂದಿಗೆ ಕುಟುಂಬ ಸಮೇತರಾಗಿ ಸಿಬ್ಬಂದಿಗಳು ಉತ್ಸಾಹದಿಂದ ಭಾಗವಹಿಸಿರುವುದು ಆಟಿಯ ಸಂಭ್ರಮವನ್ನು ಹೆಚ್ಚಿಸಿದೆ ಎಂದು ಹೇಳಿ ಶುಭ ಹಾರೈಸಿದರು.

ವಿಟ್ಲ ಬಸ್ಸ್ ನಿಲ್ದಾಣದ ಸಂಚಾರ ನಿಯಂತ್ರಣಾಧಿಕಾರಿ ಕೋಚಣ್ಣ ಪೂಜಾರಿ ಮಾತನಾಡಿ, ಆಟಿಯ ವೈಶಿಷ್ಟ್ಯತೆಯ ಬಗ್ಗೆ ವಿಚಾರ ಮಂಡನೆ ಮಾಡಿದರು. ನಂತರ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿಗಳು ಕಡಿಮೆ ಸಿಬ್ಬಂದಿಗಳನ್ನು ಬಳಸಿ ಒಟ್ಟು ಐದು ವಾಹನಗಳ ನವೀಕರಣಗೊಳಿಸಿರುವ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರಿಂದ ಬಹುಮಾನ ರೂಪದಲ್ಲಿ ಪಡೆದ 10,000 ರೂಪಾಯಿಯನ್ನು ವಿಭಾಗೀಯ ಕಾರ್ಯಾಗಾರದ ಸಿಬ್ಬಂದಿಗಳಿಗೆ ಕೊಟ್ಟಿರುವುದಕ್ಕಾಗಿ ಅವರ ಪ್ರಾಮಾಣಿಕ ಸೇವೆಯೊಂದಿಗೆ ವಿಶೇಷ ವ್ಯಕ್ತಿತ್ವವನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ನಿರ್ವಾಹಕರೆ ತಯಾರಿಸಿದ ವಿವಿಧ 50 ಬಗೆಯ ತಿಂಡಿ ತಿನಿಸುಗಳು ಕಾರ್ಯಕ್ರಮದ ಆಕರ್ಷಣೆಯಾಗಿತ್ತು.

ಈ ಸಂದರ್ಭದಲ್ಲಿ ಪುತ್ತೂರು ವಿಭಾಗದ ಆಡಳಿತಾಧಿಕಾರಿ ಶ್ರೀಮತಿ ರೇವತಿ,ವಿಭಾಗೀಯ ಸಂಚಲನಾಧಿಕಾರಿ ಮುರಳೀಧರ ಭಟ್ , ವಿಭಾಗೀಯ ಯಾಂತ್ರಿಕ ಅಭಿಯಂತರಾದ ಶ್ರೀಮತಿ ಆಶಾಲತ, ವಿಭಾಗೀಯ ಲೆಕ್ಕಪತ್ರ ಅಧಿಕಾರಿ ಆಶಾಲತ, ವಿಭಾಗೀಯ ಅಂಕಿ ಅಂಶ ನಿರ್ವಹಣಾಧಿಕಾರಿಯವರಾದ ಶ್ರೀ ಹರೀಶ್ ಕೊಟ್ಟಾರಿ, ಪುತ್ತೂರು ಘಟಕದ ಹಿರಿಯ ಘಟಕ ವ್ಯವಸ್ಥಾಪಕರಾದ ಇಸ್ಮಾಯಿಲ್ ಮತ್ತಿತರರು ಉಪಸ್ಥಿತರಿದ್ದರು.

ಬಿಸಿರೋಡ್ ಘಟಕ ವ್ಯವಸ್ಥಾಪಕರಾದ ಶ್ರೀಷ ಭಟ್ ಸ್ವಾಗತಿಸಿದರು.ಬಿಸಿರೋಡ್ ಘಟಕದ ಸಹಾಯಕ ಕಾರ್ಯಾಧೀಕ್ಷಕಿಯಾದ ಶ್ರೀಮತಿ ವಿನಯಾ.ಜಿ. ರೈ ಕಾರ್ಯಕ್ರಮ ಆಯೋಜಿಸಿದ್ದರು , ಬಿಸಿರೋಡ್ ನಿರ್ವಾಹಕ ದಾಮೋದರ ಧನ್ಯವಾದ ಸಲ್ಲಿಸಿದರು.

See also  ಅಡ್ಕಾರು ಬಳಿ ತಡೆಗೋಡೆಗೆ ಗುದ್ದಿದ ಆಲ್ಟೋ ಕಾರು, ಕಾರು ಜಖಂ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget