ಕ್ರೈಂರಾಜಕೀಯವೈರಲ್ ನ್ಯೂಸ್

ಮಹಾರಾಷ್ಟ್ರದಲ್ಲಿ ಕರ್ನಾಟಕದ ಸರ್ಕಾರಿ ಬಸ್‌ಗೆ ಬೆಂಕಿ ಹಚ್ಚಿದ್ದೇಕೆ? ಮಹಾರಾಷ್ಟ್ರದ ಬಸ್ ಕರ್ನಾಟಕಕ್ಕೂ ಬರುತ್ತೆ ಎಂದು ಖಡಕ್ ಎಚ್ಚರಿಕೆ ಕೊಟ್ಟ ರಾಮಲಿಂಗಾರೆಡ್ಡಿ

272

ನ್ಯೂಸ್‌ ನಾಟೌಟ್‌: ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಕಿಚ್ಚಿಗೆ KSRTC ಬಸ್‌ಗೆ ಬೆಂಕಿ ಹಚ್ಚಲಾಗಿದೆ. ಮಹಾರಾಷ್ಟ್ರದ ಉಸ್ಮಾನಾಬಾದ್​ ಜಿಲ್ಲೆಯ ಉಮರಗಾ ತಾಲೂಕಿನ ತುರೋರಿ ಗ್ರಾಮದಲ್ಲಿ ಉದ್ರಿಕ್ತರು ಕೆಎಸ್‌ಆರ್‌ಟಿಸಿ ಬಸ್‌ಗೆ ಬೆಂಕಿ ಹಚ್ಚಿದ್ದಾರೆ.

ಕರ್ನಾಟಕದ ಬಸ್‌ಗೆ ಬೆಂಕಿ ಹಾಕೋದಕ್ಕೂ, ಮಹಾರಾಷ್ಟ್ರದ ಹೋರಾಟಕ್ಕೂ ಸಂಬಂಧ ಇಲ್ಲ. ನಮ್ಮ ಬಸ್‌ಗೆ ಬೆಂಕಿ ಹಾಕಿದ ಕೃತ್ಯ ಸರಿ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ.

ಮಹಾರಾಷ್ಟ್ರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ ಮರಾಠ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪ್ರಕರಣಕ್ಕೆ ವಿಜಯಪುರದಲ್ಲಿ ಪ್ರತಿಕ್ರಿಯಿಸಿದ ಸಾರಿಗೆ ಸಚಿವ, ಮಹಾರಾಷ್ಟ್ರ ಸರ್ಕಾರ ಇದನ್ನು ಖಂಡಿಸಬೇಕು. ಬೆಂಕಿ ಇಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮಹಾರಾಷ್ಟ್ರದ ಬಸ್‌ಗಳು ನಮ್ಮ ಕರ್ನಾಟಕಕ್ಕೂ ಬರುತ್ತವೆ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಮಹಾರಾಷ್ಟ್ರದ ಬಸ್‌ಗಳು ತಮಿಳುನಾಡು, ಕೇರಳ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೂ ಹೋಗುತ್ತವೆ ಅಲ್ವಾ? ನಮಗೂ ಅವರಿಗೂ ಜಗಳ ಇಲ್ಲ. ಮಹಾರಾಷ್ಟ್ರದ ಹೋರಾಟಕ್ಕೂ ನಮಗೂ ಸಂಬಂಧ ಇಲ್ಲ. ಅದು ಅವರ ಆಂತರಿಕ ವಿಚಾರ. ಅವರ ಆಂತರಿಕ ವಿಚಾರಕ್ಕೂ ಕರ್ನಾಟಕದ ಬಸ್‌ಗೆ ಬೆಂಕಿ ಹಾಕೋದಕ್ಕೂ ಸಂಬಂಧವೇ ಇಲ್ಲ. ಹೋರಾಟ ಮಾಡುವವರು ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ವರ್ಸಸ್ ಡಿಸಿಎಂ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ಮೊದಲು ವಿಪಕ್ಷ ನಾಯಕ ಮಾಡಿಕೊಳ್ಳಲು ಹೇಳಿ. ಬಿಜೆಪಿ ಸೋತು ಸುಣ್ಣವಾಗಿ ಹೋಗಿದೆ ಎಂದು ಮಾತಲ್ಲೆ ಬಿಜೆಪಿಗೆ ತಿರುಗೇಟು ಕೊಟ್ಟರು.

ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ ಈಗ. ಇದೆಲ್ಲ ಮಾಧ್ಯಮ ಸೃಷ್ಟಿ. ಮಾಧ್ಯಮದವರು ಕೇಳುತ್ತಾರೆ ಅಂತ ಅವರು ಏನೋ ಹೇಳ್ತಾರೆ ಎಂದರು. ಮಹಾರಾಷ್ಟ್ರ ಮಾದರಿಯಲ್ಲಿ ಸರ್ಕಾರ ಬದಲಾವಣೆ ಮಾಡುತ್ತೇವೆ ಎಂದು ಪಾಪ ಬಿಜೆಪಿಯವರು ಕನಸು ಕಾಣ್ತಿದ್ದಾರೆ ಎಂದು ರಾಮಲಿಂಗ ರೆಡ್ಡಿ ಬಿಜೆಪಿಯನ್ನು ಟೀಕಿಸಿದ್ದಾರೆ.

See also  ಒಂದೇ ದ್ವಿಚಕ್ರ ವಾಹನದ ಮೇಲೆ 300 ಕೇಸ್, 3 ಲಕ್ಷ ರೂ. ದಂಡ..! ಇಲ್ಲಿದೆ ಸಂಪೂರ್ಣ ಕಹಾನಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget