ಬೆಂಗಳೂರುರಾಜಕೀಯರಾಜ್ಯವೈರಲ್ ನ್ಯೂಸ್

ಕೆ.ಎಸ್ ಈಶ್ವರಪ್ಪ ಭೇಟಿ ನಿರಾಕರಿಸಿದ ಅಮಿತ್ ಶಾ..! ಈ ಮೂಲಕ ನನ್ನ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದ ಈಶ್ವರಪ್ಪ

36
Spread the love

ನ್ಯೂಸ್ ನಾಟೌಟ್: ‘ದೆಹಲಿಯಲ್ಲಿ ತಮಗೆ ಭೇಟಿ ನಿರಾಕರಿಸುವ‌ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನನ್ನ ಸ್ಪರ್ಧೆಗೆ ಹಸಿರು ನಿಶಾನೆ ತೋರಿದ್ದಾರೆ’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಗುರುವಾರ(ಎ.೪)ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೆಬಲ್ ಈಶ್ವರಪ್ಪ, ‘ದೆಹಲಿಗೆ ಕರೆದಾಗ ಅವರಿಗೆ ಗೌರವಕೊಟ್ಟು ಹೋಗಿದ್ದೆನು. ಆದರೆ, ಅವರು ಭೇಟೆಯಾಗದೆ ನಾನು ಸ್ಪರ್ಧೆ ಮಾಡುವುದಕ್ಕೆ ಅಸ್ತು ಎಂಬ ಸಂದೇಶ ನೀಡಿದ್ದಾರೆ’ ಎಂದಿದ್ದಾರೆ. ಅಮಿತ್ ಶಾ ಮನೆಯಲ್ಲಿ ಬುಧವಾರ ರಾತ್ರಿ ಅವರ ಭೇಟಿಗೆ ಸೂಚಿಸಲಾಗಿತ್ತು. ಕೊನೆಯ ಗಳಿಗೆಯಲ್ಲಿ ಭೇಟಿಯ ಅವಶ್ಯಕತೆ ಇಲ್ಲ ಎಂದು ಅಮಿತ್ ಶಾ ಹೇಳಿರುವುದಾಗಿ ಅವರ ಕಚೇರಿಯ ಸಿಬ್ಬಂದಿ ತಿಳಿಸಿದರು. ಅದರ ಅರ್ಥ ನೀನು ಶಿವಮೊಗ್ಗಕ್ಕೆ ವಾಪಸ್‌ ಹೋಗು, ಅಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಬಾ ಎಂಬುದೇ ಆಗಿತ್ತು. ಸ್ವತಃ ಪಕ್ಷದ ವರಿಷ್ಠರೇ ಸಂದೇಶವನ್ನು ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಅಮಿತ್ ಶಾ ಅವರು ನನಗೆ ಕರೆ ಮಾಡಿದಾಗ ನನ್ನ ಸ್ಪರ್ಧೆಯ ಸ್ಪಷ್ಟ ಉದ್ದೇಶ ಅವರಿಗೆ ತಿಳಿಸಿದ್ದೇನೆ. ರಾಜ್ಯದಲ್ಲಿ ಬಿಜೆಪಿಯ ಶುದ್ಧೀಕರಣಕ್ಕಾಗಿ ಸ್ಪರ್ಧೆ ಎಂದು ಹೇಳಿದ್ದೆ. ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬ ರಾಜಕಾರಣ, ಹೊಂದಾಣಿಕೆ ರಾಜಕಾರಣದ ವಿರುದ್ಧ ನಾನು ಆಕ್ಷೇಪಿಸಿದ್ದೆನು. ಆಗ ನನ್ನ ಪ್ರಶ್ನೆಗೆ ಅಮಿತ್ ಶಾ ಅವರ ಬಳಿ ಯಾವುದೇ ಉತ್ತರ ಇರಲಿಲ್ಲ. ಹೀಗಾಗಿಯೇ ಅವರು ನನಗೆ ಭೇಟಿಗೆ ಅವಕಾಶ ನೀಡದೇ ಹೊರಡು ಎಂದು ಹೇಳಿರಬಹುದು ಎಂದಿದ್ದಾರೆ. ಅಮಿತ್‌ ಶಾ ಅವರ ನಿರ್ಣಯವನ್ನು ಸ್ವಾಗತಿಸುವೆ. ಅವರು ಭೇಟಿಯಾಗಿದ್ದರೆ ಅವರಿಗೆ ಈ ಎಲ್ಲ ವಿಷಯವನ್ನು ಪ್ರಸ್ತಾಪ ಮಾಡುವವನಿದ್ದೆ. ಆದರೆ, ಅವರು ಭೇಟಿಯಾಗಲಿಲ್ಲ. ಇದು ನನ್ನ ಸ್ಪರ್ಧೆಗೆ ಭಗವಂತನೇ ಕೃಪೆ ತೋರಿದ್ದಾನೆ. ಅಮಿತ್‌ ಶಾ, ನರೇಂದ್ರ ಮೋದಿ ಅಪೇಕ್ಷೆಯಂತೆ ನಾನು ಸ್ಪರ್ಧೆ ಮಾಡಿ, ಗೆದ್ದು ಮೋದಿ ಪ್ರಧಾನಿಯಾಗುವುದಕ್ಕೆ ಕೈ ಎತ್ತುತ್ತೇನೆ ಎಂದಿದ್ದಾರೆ.

See also  ರಸ್ತೆ ಮಧ್ಯೆ ಕಾರು ನಿಲ್ಲಿಸಿ ಬ್ಯಾರಿಕೇಡ್‌ ಗೆ ಬೆಂಕಿ ಹಚ್ಚಿದ್ದೇಕೆ ಆತ..? ಬಂಧಿಸಿದ ಪೊಲೀಸರ ಮೇಲೆಯೇ ಹಲ್ಲೆ..! ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget