ಕರಾವಳಿ

ಸುಳ್ಯದಲ್ಲಿ ಕೃಷಿ ಮೇಳಕ್ಕೆ ಅದ್ಧೂರಿ ಚಾಲನೆ  

ನ್ಯೂಸ್ ನಾಟೌಟ್ : ಕಳೆದ ಕೆಲವು ದಿನಗಳಿಂದ ಭಾರಿ ನಿರೀಕ್ಷೆ ಮೂಡಿಸಿದ್ದ ಕೃಷಿ ಮೇಳಕ್ಕೆ ಶುಕ್ರವಾರ ಸುಳ್ಯದ ಚೆನ್ನಕೇಶವ ದೇವಸ್ಥಾನದ ಬಳಿ ಅದ್ಧೂರಿ ಚಾಲನೆ ಸಿಕ್ಕಿದೆ.

ನೂರಾರು ಕೃಷಿ ಸಂಬಂಧಿತ ಸ್ಟಾಲ್ ಗಳು, ಪ್ರಗತಿ ಪರ ರೈತರ ಸಮ್ಮಖದಲ್ಲಿ ಮಾಣಿಲ ಶ್ರೀ ಮೋಹನದಾಸ ಸ್ವಾಮಿ ಕೃಷಿ ಮೇಳದ ಮಳಿಗೆಗಳು ಮತ್ತು ತಾರಾ ನಿಲಯದ ಉದ್ಘಾಟನೆ ಮಾಡಿದರು. ಪಯಸ್ವಿನಿ ಕೃಷಿ ಮೇಳದ  ಧ್ವಜಾ ರೋಹಣವನ್ನು ಮೀನುಗಾರಿಕಾ ಬಂದರು ಮತ್ತು ಒಳನಾಡು  ಜಲಸಾರಿಗೆ ಸಚಿವ ಎಸ್ ಅಂಗಾರ ಅವರು ಧ್ವಜಾ ರೋಹಣವನ್ನು ಮಾಡಿದರು.  ಗೋ ಪೂಜೆ ಮತ್ತು ಆರ್ಶೀವಚನ  ಮೋಹನದಾಸ ಸ್ವಾಮಿ ಕ್ಷೇತ್ರ ಮಾಣಿಲ ಕೃಷಿ ಮೇಳದ  ಮಳಿಗೆಗಳಿಗೆ ಮತ್ತು ತಾರಾನಿಲಯದ ಉದ್ಘಾಟನಾ ಸಮಾರಂಭವನ್ನು ಮಾಡಿದರು. ಹಾಗೂ   ಕೃಷಿ ಸಾಧಕ ಆಮೈ ಮಹಲಿಂಗೇಶ್ವರ ನಾಯ್ಕ,    ತಾರಾನಿಲಯದ ಮಳಿಗೆಗಳಿಗೆ ಚಾಲನೆ  ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ , ಪುತ್ತೂರು ಶಾಸಕ  ಸಂಜೇವ ಮಠಂದೂರು,  ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಮೊದಲಾದ ಗಣ್ಯರು ಉಪಸ್ಥಿತರಿದ್ದರು.  ಕೃಷಿ ಮಳಿಗೆಗಳು ಮತ್ತು ತಾರಾನಿಲಯದಲ್ಲಿ ಹಳೆಯ ಕಾಲದ ಕಸುಬುಗಳು, ಹಳೆಯ ಕಾಲದ ಮನೆಗಳು ಮತ್ತು ವಸ್ತುಪ್ರದರ್ಶನವು ಜನರ ಕಣ್ಮನ ಸೆಳೆದವು.

Related posts

ಸುಳ್ಯ :ಎನ್ನೆಂಸಿ ಎನ್.ಎಸ್.ಎಸ್ ಮತ್ತು ಯುವ ರೆಡ್ ಕ್ರಾಸ್ ವತಿಯಿಂದ ಮಾದಕದ್ರವ್ಯ ವ್ಯಸನ ತಡೆಗಟ್ಟುವ ಮಾಹಿತಿ ಕಾರ್ಯಕ್ರಮ

ಮಂಗಳೂರು: ಚಿನ್ನವನ್ನು ಪೌಡರ್ ರೂಪಕ್ಕಿಳಿಸಿ ಕಳ್ಳಸಾಗಣೆ ! ಪ್ರಯಾಣಿಕರನ್ನು ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು

ಧಾರಾಕಾರ ಮಳೆಗೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನೇತ್ರಾವತಿ, ಕುಮಾರಧಾರ..! ಹಲವೆಡೆ ಸೇತುವೆ ಮುಳುಗಡೆ, ಕಳಸ-ಉಡುಪಿ ಸಂಪರ್ಕ ಬಂದ್‌