ಕರಾವಳಿಕಾಸರಗೋಡು

ರಾಜ್ಯಕ್ಕೆ ಮೋದಿಯ ಭೇಟಿ ಫೋಟೋ ಶೂಟ್‌ಗಾಗಿ..! ಕೆಪಿಸಿಸಿ ವಕ್ತಾರ ಟಿಎಂ ಶಹೀದ್ ವ್ಯಂಗ್ಯ

341

ನ್ಯೂಸ್ ನಾಟೌಟ್: ಚುನಾವಣಾ ಸಂದರ್ಭದಲ್ಲಿ ಕರ್ನಾಟಕಕ್ಕೆ ಮೋದಿಯವರು ಆಗಾಗ್ಗೆ ಭೇಟಿ ಕೊಡುತ್ತಿರುವುದನ್ನು ಕೆ.ಪಿ.ಸಿ.ಸಿ ಬೆಳ್ತಂಗಡಿ ಉಸ್ತುವಾರಿ ಹಾಗು ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ವ್ಯಂಗ್ಯವಾಡಿದ್ದಾರೆ.

ಮೋದಿ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಕರ್ನಾಟಕಕ್ಕೆ ಭೇಟಿ ಕೊಡುತ್ತಾರೆ. ಇದು ಯಾವ ಪುರುಷಾರ್ಥಕ್ಕೆ ಎಂದು ಗೊತ್ತಾಗುತ್ತಿಲ್ಲ. ಅವರು ಇಲ್ಲಿ ತನಕ ಬರುವುದು ಫೋಟೋ ಶೂಟ್ ಮಾಡಿಸಿಕೊಳ್ಳುವುದಕ್ಕೆ ಹೊರತು ಮತ್ಯಾವುದಕ್ಕೂ ಅಲ್ಲ. ಕರ್ನಾಟಕದಲ್ಲಿ ಅದರಲ್ಲಿಯು ಪ್ರಮುಖವಾಗಿ ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಜಲಪ್ರಳಯ, ನೆರೆ ಮತ್ತು ಭೂಕಂಪ ಸಂಭವಿಸಿದಾಗ ಭೇಟಿ ನೀಡದ ಯಾವುದೇ ವಿಶೇಷ ಅನುದಾನ ನೀಡದ ಪ್ರಧಾನಿ ಮೋದಿಯವರು ಇದ್ದಕ್ಕಿದ್ದಂತೆ ಕರ್ನಾಟಕದ ಮೇಲೆ ಏಕೆ ಪ್ರೀತಿ ಉಕ್ಕಿತು? ಇದು ಕರ್ನಾಟಕದಲ್ಲಿ ಮುಂದೆ ನಡೆಯುವ ಚುನಾವಣೆಗೋಸ್ಕರ ಹೊರತು ಬೇರೇನೂ ಅಲ್ಲ ಎಂದು ತೆಕ್ಕಿಲ್ ಪ್ರತಿಕ್ರಿಯಿಸಿದರು.

See also  ಸುಳ್ಯ: ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget