ಕ್ರೈಂಸುಳ್ಯ

ಕೊಯನಾಡು: ಚಡಾವಿನಲ್ಲಿ ಕಳವಿಗೆ ಯತ್ನ, ಮನೆಮಂದಿ ಎಚ್ಚರಗೊಂಡಾಗ ಎದ್ನೋ ಬಿದ್ನೋ ಎಂದು ಎಸ್ಕೇಪ್ ಆದ ಕಳ್ಳರು..!

ನ್ಯೂಸ್ ನಾಟೌಟ್ : ಕೊಯನಾಡಿನ ಚಡಾವಿನಲ್ಲಿ ನಿನ್ನೆ ತಡರಾತ್ರಿ (ಜೂ.19) ಕಳ್ಳರ ತಂಡವೊಂದು ಮನೆಯೊಳಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಘಟನೆ ವರದಿಯಾಗಿದೆ.

ಚಡಾವಿನ ಬಬಿನ್ ಎಂಬವರ ಮನೆಗೆ ತಡರಾತ್ರಿ ಕಳ್ಳರ ತಂಡ ನುಗ್ಗಲು ಯತ್ನಿಸಿದೆ. ಈ ವೇಳೆ ಕಳ್ಳರು ಪಿವಿಸಿ ಪೈಪ್ ಬಳಸಿ ಪರ್ಸ್ ಎಗರಿಸಲು ವಿಫಲ ಯತ್ನ ನಡೆಸಿದ್ದಾರೆ. ಈ ವೇಳೆ ಮನೆಯವರಿಗೆ ಎಚ್ಚರವಾಗಿದೆ. ತಕ್ಷಣ ಮನೆಯವರು ಬೊಬ್ಬೆ ಹಾಕಿದಾಗ ಕಳ್ಳರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಸದ್ಯ ಕೊಯನಾಡಿನಲ್ಲಿ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಕಳ್ಳರು ದ್ವಿಚಕ್ರ ವಾಹನದಲ್ಲಿ ತೆರಳಿರುವುದು ಕಂಡುಬಂದಿದೆ.

https://newsnotout.com/2024/06/ramayana-stage-play-fine-due-to-misleading-content-and-parts

Related posts

ಪ್ರಜ್ವಲ್ ರೇವಣ್ಣ ಶೀಘ್ರವೇ ಶರಣಾಗುತ್ತಾರೆ ಎಂದ ಜೆಡಿಎಸ್‌ನ ಹಿರಿಯ ನಾಯಕ, ಈ ಬಗ್ಗೆ ಬಿಜೆಪಿ ನಾಯಕರು ಹಾಗೂ ಜೆಡಿಎಸ್ ನಾಯಕರು ಚರ್ಚೆ ನಡೆಸಲಿದ್ದೇವೆ ಎಂದ ಸಿ.ಎಸ್.ಪುಟ್ಟರಾಜು

ಕಂದಕಕ್ಕೆ ಉರುಳಿದ ಬಸ್ಸ್ ! ಕನಿಷ್ಠ 17 ಮಂದಿ ದಾರುಣ ಸಾವು!

ಪುತ್ತೂರು: ಆನ್ ಲೈನ್ ನಲ್ಲಿ ಡ್ರಮ್ ಖರೀದಿಸಿದ ಉದ್ಯಮಿಗೆ ಉಂಡೆನಾಮ..! ಮೂರು ಹಂತದಲ್ಲಿ ಹಣ ಪೀಕಿದ ವಂಚಕರು