Latest

ಕೋಟದಲ್ಲಿ ಪಾಠ ಮಾಡುವುದಕ್ಕೂ ಬಂದ್ರು ನೋಡಿ ರೋಬೋ ಟೀಚರ್ಸ್..!ವಿದ್ಯಾಸಂಸ್ಥೆಯೊಂದರ ಹಳೆ ವಿದ್ಯಾರ್ಥಿಗಳಿಂದ ರಾಜ್ಯದಲ್ಲೇ ಮೊತ್ತ ಮೊದಲ ಪ್ರಯೋಗ!

639

ನ್ಯೂಸ್‌ ನಾಟೌಟ್: ನಾವು ಎಂಥೆಂಥ ರೋಬೋಟ್ ಗಳನ್ನು ನೋಡಿದ್ದೇವೆ. ಜನರಿಗೆ ಅಚ್ಚರಿಯಾಗುವಂತೆ ಕೆಲಸ ನಿರ್ವಹಿಸುವ ರೋಬೋಟ್ ಈಗೀಗ ಸಾಮಾನ್ಯ ವೆಂಬಂತೆ ಇತ್ತು. ಇದೀಗ ಮತ್ತೆ ನೀವು ಹುಬ್ಬೇರಿಸಲೇ ಬೇಕು. ಏಕೆಂದರೆ ರಾಜ್ಯದಲ್ಲೇ ಮೊತ್ತ ಮೊದಲ ಬಾರಿ ಪಾಠ ಮಾಡುವುದಕ್ಕೂ ರೋಬೋ ಟೀಚರ್ಸ್ ಬಂದಿದ್ದಾರೆ ನೋಡಿ.. ಹೌದು, ನಿಮ್ಗೆ ಆಶ್ಚರ್ಯವಾದರೂ ಇದು ನಿಜ.

ಕೋಟ ಸಮೀಪ ಅಚ್ಲಾಡಿಯ ಇ.ಸಿ.ಆರ್‌. ಸಮೂಹ ಶಿಕ್ಷಣ ಸಂಸ್ಥೆಗೆ ರೋಬೋ ಟೀಚರ್‌ ಬಂದಿದ್ದಾರೆ. ಅದು ಕೂಡ ಇದನ್ನು ಸಿದ್ಧಪಡಿಸಿದ್ದು ಹಳೆ ವಿದ್ಯಾರ್ಥಿಗಳು ಅನ್ನೋದು ವಿಶೇಷ. ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ತಂತ್ರಜ್ಞಾನ ಬಳಸಿ ಸೃಷ್ಟಿಸಿದ ಈ ಎಐ ಟೀಚರನ್ನು ರೂಪಿಸಿದ್ದು ಮತ್ತು ಪ್ರಯೋಗಕ್ಕೆ ಒಡ್ಡಿದ್ದು ಈ ವಿದ್ಯಾಸಂಸ್ಥೆಯಲ್ಲಿ ಓದಿದ ಹಳೆ ವಿದ್ಯಾರ್ಥಿಗಳು. ಬಿಸಿಎ, ಬಿಬಿಎ, ನರ್ಸಿಂಗ್‌ ಮೊದಲಾದ ಕೋರ್ಸ್ ಗಳನ್ನು ಹೊಂದಿದ ಕಾಲೇಜಿನಲ್ಲಿ ರೋಬೋ ಶಿಕ್ಷಕಿಯ ಮೊದಲ ಪಾಠ ಇತ್ತೀಚೆಗೆ ನಡೆಯಿತು. ವಿದ್ಯಾರ್ಥಿಗಳಿಗೆ ಪಾಠ ಮಾಡುವ ಮತ್ತು ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ರೋಬೋ ಟೀಚರ್‌ ಬಾರಿ ಕುತೂಹಲ ಮೂಡಿಸುವಂತೆ ಇತ್ತು.

ಅಂದ ಹಾಗೆ ಈ ಹಿಂದೆ ಕೇರಳದ ತಿರುವನಂತಪುರಂನಲ್ಲಿರುವ ಕೆ.ಟಿ.ಸಿ.ಟಿ. ಹೈಯರ್ ಸೆಕೆಂಡರಿ ಶಾಲೆಯಲ್ಲಿ 2024 ಮಾರ್ಚ್‌ ನಲ್ಲಿ ದೇಶದ ಮೊದಲ ಎ.ಐ. ಟೀಚರ್‌ ವ್ಯವಸ್ಥೆ ಪರಿಚಯಿಸಲಾಗಿತ್ತು. ಮೇಕರ್ ಲ್ಯಾಬ್ಸ್ ಎಜುಟೆಕ್ ಪ್ರೈವೇಟ್ ಲಿಮಿಟೆಡ್‌ನ‌ ಎನ್ನುವ ಸಂಸ್ಥೆ ಇದನ್ನು ಸೃಷ್ಟಿಸಿದ್ದು, ಕುತೂಹಲಕ್ಕೆ ಕಾರಣವಾಗಿತ್ತು.

ಇದೀಗ ರಾಜ್ಯದಲ್ಲಿಯೂ ಈ ಪ್ರಯೋಗ ನಡೆದಿದ್ದು ರಾಜ್ಯವೇ ಹೆಮ್ಮೆ ಪಡುವ ವಿಚಾರ. ಅಂದ ಹಾಗೆ ಈ ತಂತ್ರಜ್ಞಾನವನ್ನು ಇ.ಸಿ.ಆರ್‌ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿಗಳಾದ ಕೇರಳ ಮೂಲದವರೇ ಆದ ಸಾಗರ್‌ ಮತ್ತು ಅಮಲ್ ಎಂಬವರು ಅಭಿವೃದ್ಧಿಪಡಿಸಿದ್ದಾರೆ. ಅವರೀಗ ತಾವು ಕಲಿತ ವಿದ್ಯಾಸಂಸ್ಥೆಯಲ್ಲೇ ಈ ಪ್ರಯೋಗಕ್ಕೆ ಮುಂದಾಗಿದ್ದಾರೆ. ತಮ್ಮ ಗುರಿ ಐಶಸ್ವಿಯಾದರೆ ಮುಂದೆ ಮಾರುಕಟ್ಟೆಗೆ ಪರಿಚಯಿಸುವ ಆಸೆಯೂ ಅವರಿಗಿದೆಯಂತೆ.

 

See also  ವೈದ್ಯ ದಂಪತಿಯ ಸಂಬಂಧಕ್ಕೆ ಹುಳಿ ಹಿಂಡಿದ ರೀಲ್ಸ್ ರಾಣಿ .! ಮನನೊಂದ ಪತ್ನಿಯಿಂದ ಕೆಟ್ಟ ನಿರ್ಧಾರ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget