ಕಲ್ಲುಗುಂಡಿ: ಸುದೀರ್ಘ ಕಾಲದಿಂದ ಕೊರಗಜ್ಜನ ಆರಾಧನೆ ಮಾಡಿಕೊಂಡು ಬಂದಿರುವ ಕಲ್ಲುಗುಂಡಿಯ ಭಕ್ತೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಠಾತ್ ವೈರಲ್ ಆಗಿದ್ದಾರೆ. ಇತ್ತೀಚೆಗೆ ನ್ಯೂಸ್ ನಾಟೌಟ್ ತಂಡ 70 ವರ್ಷದ ಅಜ್ಜಿ ದೇವಕಿ ಕೈಪಡ್ಕ ಎಂಬುವವರನ್ನು ವಿಶೇಷ ಸಂದರ್ಶನ ನಡೆಸಿತ್ತು. ಈ ವೇಳೆ ಅಜ್ಜಿ ಕೊರಗಜ್ಜನ ಕಥೆ ಹಾಗೂ ಕೊರಗ ತನಿಯನ ಪಾರ್ದನವನ್ನು ಹೇಳಿದ್ದರು. ಈ ವಿಡಿಯೋ ನ್ಯೂಸ್ ನಾಟೌಟ್ ಯು ಟ್ಯೂಬ್ ಚಾನಲ್‌ನಲ್ಲಿ ಹಾಗೂ ಫೇಸ್ ಬುಕ್‌ನಲ್ಲಿ ಪ್ರಕಟವಾಗಿತ್ತು. ಸಾವಿರಾರು ಜನರು ಇದನ್ನು ವೀಕ್ಷಿಸಿ ಅಜ್ಜಿಯ ಮುಗ್ದ ಭಕ್ತಿಯನ್ನು ಕೊಂಡಾಡಿದ್ದರು. ಫೇಸ್ ಬುಕ್ ಒಂದರಲ್ಲೇ ಹತ್ತು ಸಾವಿರಕ್ಕೂ ಅಧಿಕ ಮಂದಿ ಹಾಗೂ ಯುಟ್ಯೂಬ್ ನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ವೀಕ್ಷಿಸಿದ್ದರು. ನ್ಯೂಸ್ ನಾಟೌಟ್ ತಂಡ ಕ್ಷಿಪ್ರ ಗತಿಯಲ್ಲಿ ಜನರನ್ನು ತಲುಪುತ್ತಿದೆ. ಡಿಜಿಟಲ್ ಮಾಧ್ಯಮಗಳ ಪೈಕಿ ಅತ್ಯಂತ ವೇಗವಾಗಿ ಮಾಹಿತಿ ರವಾನಿಸುತ್ತಿದೆ. ಎಲ್ಲ ನಮ್ಮ ವೆಬ್ ಸೈಟ್ ಓದುಗರಿಗೆ ಹಾಗೂ ಯು ಟ್ಯೂಬ್ ವೀಕ್ಷಕರಿಗೆ ನ್ಯೂಸ್ ನಾಟೌಟ್ ತಂಡದ ಹೃದಯ ಪೂರ್ವಕ ಧನ್ಯವಾದಗಳು. ವಿಡಿಯೋ ಇಲ್ಲಿದೆ ನೋಡಿ: https://youtu.be/Zhs0PXhuxx4