ಕರಾವಳಿಕ್ರೀಡೆಮಂಗಳೂರುರಾಜ್ಯವೈರಲ್ ನ್ಯೂಸ್ಸಿನಿಮಾ

ಕುತ್ತಾರು ಕೊರಗಜ್ಜನ ಕೋಲದಲ್ಲಿ ಕತ್ರಿನಾ ಕೈಫ್‌, ಕೆ.ಎಲ್‌ ರಾಹುಲ್‌ ಭಾಗಿ, ಹರಕೆ ತೀರಿಸಿದ 9 ಮಂದಿ ಸೆಲೆಬ್ರಿಟಿಗಳು..!

282

ನ್ಯೂಸ್ ನಾಟೌಟ್: ಬಾಲಿವುಡ್‌ನ‌ ಖ್ಯಾತ ನಟಿ ಕತ್ರಿನಾ ಕೈಫ್‌(Katrina Kaif), ಕ್ರಿಕೆಟಿಗ ಕೆ.ಎಲ್‌. ರಾಹುಲ್‌ (KL Rahul) ಹಾಗೂ ನಟ ಸುನಿಲ್‌ ಶೆಟ್ಟಿ(Sunil Shetty) ಕುಟುಂಬ ಉಳ್ಳಾಲದ ಕುತ್ತಾರು ಕೊರಗಜ್ಜನ ಕಟ್ಟೆಯಲ್ಲಿ(koragajja temple kuttar) ಭಾನುವಾರ(ಜುಲೈ.14) ನಡೆದ ಹರಕೆಯ ಕೋಲದಲ್ಲಿ ಭಾಗಿಯಾಗಿದ್ದರು.

ಕತ್ರಿನಾ ಕೈಫ್‌, ಸುನಿಲ್‌ ಶೆಟ್ಟಿ ಪುತ್ರ ಅಹಾನ್‌ ಶೆಟ್ಟಿ, ಪುತ್ರಿ ಅಥಿಯಾ ಶೆಟ್ಟಿ, ಮ್ಯಾಟ್ರಿಕ್ಸ್‌ ಎಂಟರ್‌ಟೈನ್‌ಮೆಂಟ್‌ನ ರೇಷ್ಮಾ ಶೆಟ್ಟಿ, ಕತ್ರಿನಾ ಪತಿ ವಿಕಿ ಕೌಶಲ್‌ ಹಾಗೂ ವಿ.ಎಂ. ಕಾಮತ್‌ ಸಹಿತ 9 ಮಂದಿ ಸೆಲೆಬ್ರಿಟಿಗಳು ಕೋಲವನ್ನು ಎರಡು ತಿಂಗಳ ಹಿಂದೆ ಬರೆಸಿದ್ದರು. ಮಹಿಳೆಯರಿಗೆ ರಾತ್ರಿ ಹೊತ್ತು ಕಟ್ಟೆಯ ಒಳಗೆ ಪ್ರವೇಶ ಇಲ್ಲದ ಕಾರಣ ಕತ್ರಿನಾ, ಅಥಿಯಾ ಮತ್ತು ರೇಷ್ಮಾ ದೈವಸ್ಥಾನದ ಹೊರಗಡೆಯಿಂದ ಕೋಲವನ್ನು ವೀಕ್ಷಿಸಿದರು. ರಾಹುಲ್‌ ಮತ್ತು ಅಹಾನ್‌ ಕೋಲದಲ್ಲಿ ಭಾಗಿಯಾಗಿದ್ದರು.

ಸಂಜೆ 6 ಗಂಟೆ ವೇಳೆಗೆ ಕುತ್ತಾರಿಗೆ ಆಗಮಿಸಿದ ಇವರು ಕೋಲ ಮುಗಿದ ನಂತರ ತೆರಳಿದ್ದಾರೆ ಎನ್ನಲಾಗಿದೆ.

See also  ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಎಂದಿದ್ದ ಸ್ವಾಮೀಜಿಗೆ ಸಂಕಷ್ಟ..! ಚಂದ್ರಶೇಖರ ಸ್ವಾಮೀಜಿ ವಿರುದ್ಧ ಎಫ್.ಐ.ಆರ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget