ಭಕ್ತಿಭಾವ

ಸ್ವಾಮಿ ಕೊರಗಜ್ಜನ ವಿಗ್ರಹ ಪ್ರತಿಷ್ಠೆ, ಕೋಲ

669

ನ್ಯೂಸ್ ನಾಟೌಟ್: ಸಂಪಾಜೆ ಗ್ರಾಮದ ಗೂನಡ್ಕದ ಕಾರಣೀಕ ಕ್ಷೇತ್ರವಾದ ದೊಡ್ಡಡ್ಕ ಶ್ರೀ ಆದಿಮೊಗೇರ್ಕಳ ದೈವಸ್ಥಾನದಲ್ಲಿ ಸ್ವಾಮಿ ಕೊರಗಜ್ಜ ದೈವದ ಕೋಲದೊಂದಿಗೆ ಕೊರಗಜ್ಜ ದೈವದ ನೂತನ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮವು ಮೇ.21ರಂದು ಜರುಗಿತು. ನೂರಾರು ಮಂದಿ ದೈವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಕರಿಗಂಧ ಪ್ರಸಾದವನ್ನು ಸ್ವೀಕರಿಸಿದರು.

ಬೆಳಗ್ಗೆ ಗಣಪತಿ ಹೋಮ, ಗುಳಿಗ ಕಟ್ಟೆಯ ಪ್ರತಿಷ್ಠೆ ನಡೆದು ಸ್ವಾಮಿ ಕೊರಗಜ್ಜ ದೈವದ ಕೋಲದೊಂದಿಗೆ ನೂತನ ವಿಗ್ರಹ ಪ್ರತಿಷ್ಠೆ ನಡೆಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರರು, ಸೇವಾಕರ್ತರು, ಆಧ್ಯಕ್ಷರು , ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.

See also  ತಿರುಮಲದಲ್ಲಿ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ: ಟೋಕನ್ ಇಲ್ಲದೆ ಶ್ರೀವಾರಿ ಸರ್ವದರ್ಶನ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget