ಕರಾವಳಿಕ್ರೈಂಬೆಂಗಳೂರುವೈರಲ್ ನ್ಯೂಸ್

‘ಕೊರಗಜ್ಜ’ ಹೆಸರಲ್ಲಿ ಸಿನಿಮಾ ಮಾಡಬಾರದು ಎಂದು ತಲ್ವಾರ್ ಹಿಡಿದು ಬೆದರಿಸಿದ್ಯಾರು..? ಈ ಬಗ್ಗೆ ಡೈರೆಕ್ಟರ್ ಹೇಳಿದ್ದೇನು? ನಿರ್ದೇಶಕರಿಗೆ ಸರ್ಕಲ್ ಇನ್ಸ್ ಪೆಕ್ಟರ್ ರಾತ್ರೋರಾತ್ರಿ ಕರೆ ಮಾಡಿದ್ದೇಕೆ?

ನ್ಯೂಸ್ ನಾಟೌಟ್ : ‘ಕೊರಗಜ್ಜ’ ಹೆಸರಿನಲ್ಲಿ ಸಿನಿಮಾ ಮಾಡಬಾರದು ಎಂದು ದೈವ ನರ್ತಕರು ಬೆ* ದರಿಸಿದ್ದಾರೆ ಎನ್ನಲಾಗಿದೆ. ದೈವ ನರ್ತಕರು (Daiva Narthaka)ತಮ್ಮ ಶೂಟಿಂಗ್ ಸೆಟ್ ಗೆ ತಲ್ವಾರ್ ಹಿಡಿದುಕೊಂಡು ಬಂದು ಬೆದರಿಸಿದ್ದಾರೆ ಎಂದು ‘ಕೊರಗಜ್ಜ’ (Koragajja) ಸಿನಿಮಾ ಟೀಮ್ ಪ್ರೆಸ್ ಮೀಟ್ ಮಾಡಿ ಆರೋಪ ಮಾಡಿತ್ತು.

ಶೂಟಿಂಗ್ ಸೆಟ್ ಹಾಳು ಮಾಡಿದ್ದಾರೆ. ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಬೆ* ದರಿಕೆ ಹಾಕಿದ್ದಾರೆ ಎಂದು ನಿರ್ದೇಶಕರು ಆರೋಪ ಮಾಡಿದ್ದರು ಎನ್ನಲಾಗಿದೆ.
ಕಳಸದಲ್ಲಿ (Kalasa) ಕೊರಗಜ್ಜ ಸಿನಿಮಾದ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ನಲ್ಕೆ ಸಂಘದವರೆಂದು ಹೇಳಿಕೊಂಡ ವ್ಯಕ್ತಿಗಳು ಆಯುಧ ಹಿಡಿದುಕೊಂಡು ಬಂದು ಚಿತ್ರತಂಡದವರನ್ನು ಬೆ* ದರಿಸಿದ್ದರು ಎನ್ನುವ ಆರೋಪವಿತ್ತು.

ಈ ವಿಷಯ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿತ್ತು. ದೈವ ನರ್ತಕರನ್ನು ಕಳಸದ ಪೊಲೀಸ್ ಸ್ಟೇಷನ್ ಗೆ ಕರೆಯಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿ ತಿಳಿಸಿದೆ.

ಚಿತ್ರದ ನಿರ್ದೇಶಕರಾದ ಸುಧೀರ್ ಅತ್ತಾವರ್ (Sudhir Attavar)ಗೆ ಸರ್ಕಲ್ ಇನ್ಸ್ ಪೆಕ್ಟರ್ ರಾತ್ರಿ 9.30ಕ್ಕೆ ಕರೆ ಮುಂದಿನ ಕ್ರಮಕ್ಕಾಗಿ ದೂರು ನೀಡುವಂತೆ ತಿಳಿಸಿದ್ದಾರಂತೆ ಎನ್ನಲಾಗಿದೆ.

ದೈವ ನರ್ತಕರೆನ್ನುವವರನ್ನು ಬಂಧಿಸದೆ ಅವರಿಗೆ ಬುದ್ದಿಹೇಳಿ ಬಿಟ್ಟುಬಿಡುವಂತೆ ನಿರ್ದೇಶಕ ಸುಧೀರ್ ಅತ್ತಾವರ್ ಮನವಿ ಮಾಡಿದ್ದಾರೆ ಎನ್ನಲಾಗಿದ್ದು. ಆದರೆ ಮಂಗಳೂರು ಮತ್ತು ಕಳಸದಲ್ಲಿ ಇಂತಹ ಗೂಂಡಾಗಿರಿಗೆ ಪ್ರಚೋದಿಸಿ, ದೈವ ನರ್ತಕರನ್ನು ಗೂಂಡಾಯಿಸಂಗೆ ಪ್ರಚೋದಿಸಿ ಚಿತ್ರೀಕರಣಕ್ಕೆ ಅಪಾರಹಾನಿ ಮಾಡಲು ಕುಮ್ಮಕ್ಕು ನೀಡುತ್ತಿರುವವರನ್ನು ಬಂಧಿಸುವಂತೆ ನಿರ್ದೇಶಕರು ಹೇಳಿದ್ದಾರೆ ಎನ್ನಲಾಗಿದೆ.

FB PAGE : https://www.facebook.com/NewsNotOut2023

Insta : https://www.instagram.com/newsnotout/

Tweet : https://twitter.com/News_Not_Out

YouTube : https://www.youtube.com/@newsnotout8209

Koo app: https://www.kooapp.com/profile/NewsNotOut

Website : https://newsnotout.com/

Related posts

ಮೋರಿ ನೀರಿನಲ್ಲಿ ಕೊಚ್ಚಿ ಹೋದ ಇಂಜಿನೀಯರ್ ಯುವಕ

ಬೆಳ್ಳಾರೆಯಲ್ಲಿ ಮಹಿಳೆಯ ಶವ ಪತ್ತೆ, ಕಲ್ಲು ಎತ್ತಿ ಹಾಕಿ ಕೊಲೆಯ ಶಂಕೆ..? ಪೊಲೀಸರಿಂದ ಚುರುಕುಗೊಂಡ ತನಿಖೆ

ರಾಜ್ಯಾದ್ಯಂತ ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಪ್ರಯಾಣ ಉಚಿತ: ರಾಮಲಿಂಗಾ ರೆಡ್ಡಿ